ಕಲ್ಲಡ್ಕ

ಅಮ್ಟೂರು: ಆರೋಗ್ಯ ಕ್ಷೇಮ ಕೇಂದ್ರದ ಕಾಮಗಾರಿ ಪ್ರಗತಿ ವೀಕ್ಷಿಸಿದ ಸಂಸದ ಕ್ಯಾ. ಚೌಟ, ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಹೆಲ್ತ್ ಇನ್ಸ್ಟ್ರಕ್ಚರ್ ಮಿಷನ್ ಹಾಗೂ ಕೇಂದ್ರ ಸರಕಾರದ 15ನೇ ಹಣಕಾಸು ಯೋಜನೆಯಡಿ ರೂ 65 ಲಕ್ಷ ವೆಚ್ಚದಲ್ಲಿ ಅಮ್ಟೂರು ಎಂಬಲ್ಲಿ ನಿರ್ಮಾಣಗೊಳ್ಳುತ್ತಿರುವ ಆರೋಗ್ಯ ಕ್ಷೇಮ ಕೇಂದ್ರದ ಕಾಮಗಾರಿಯನ್ನು ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಬಂಟ್ವಾಳ ಶಾಸಕರ ಜೊತೆಗೆ ವೀಕ್ಷಿಸಿದರು.

ದಕ್ಷಿಣ ಕನ್ನಡ ಜಿಲ್ಲೆಗೆ 80 ಕೋಟಿ ರೂಪಾಯಿ ಅನುದಾನವನ್ನು ಬಂಟ್ವಾಳ ವಿಧಾನಸಭಾ ಕ್ಷೇತ್ರದ 22 ಆರೋಗ್ಯ ಕ್ಷೇಮ ಕೇಂದ್ರಕ್ಕೆ ಸುಮಾರು 14.30 ಕೋಟಿ ರೂಪಾಯಿ ಹಾಗೂ ವಿಶೇಷವಾಗಿ ಆಮ್ಟೂರು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಆರೋಗ್ಯ ಕ್ಷೇಮ ಕೇಂದ್ರಕ್ಕೆ 65 ಲಕ್ಷ ರೂಪಾಯಿ ಅನುದಾನವನ್ನು ಒದಗಿಸಿದ್ದೇನೆ ಎಂದು ಅವರು ತಿಳಿಸಿದರು.

VNR GOLD

ಈ ಸಂದರ್ಭದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು. ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಅಧ್ಯಕ್ಷ ಆರ್ ಚೆನ್ನಪ್ಪ ಕೋಟ್ಯಾನ್ , ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಹಾಗೂ ಪ್ರಮುಖರು ಸಂಸದರ ಜೊತೆಗಿದ್ದು ಗಿಡ ನೆಡುವ ಕಾರ್ಯಕ್ರಮವು ನೆರವೇರಿತು.

ಜಾಹೀರಾತು

ಬಿಜೆಪಿಯ ಜಿಲ್ಲಾ ಕಾರ್ಯದರ್ಶಿಗಳಾದ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ದಿನೇಶ್ ಅಮ್ಟೂರು ದೇವಪ್ಪ ಪೂಜಾರಿ ಬಂಟ್ವಾಳ ಮಂಡಲದ ಪ್ರಧಾನ ಕಾರ್ಯದರ್ಶಿಗಳು ಶಿವಪ್ರಸಾದ್ ಶೆಟ್ಟಿ, ಸುದರ್ಶನ ಬಜ, ಜೀಲ್ಲಾ ಪ್ರಮುಖರಾದ ಮಾಧವ ಮಾವೇ ಓಬಿಸಿ ಮೋರ್ಚಾದ ಜಿಲ್ಲಾ ಪ್ರಮುಖರಾದ ಮೋನಪ್ಪ ದೇವಸ್ಯ ಚಿದಾನಂದ ಮುರಬೈಲು ಗೋಪಾಲ ಪೂಜಾರಿ,ಲಖೀತಾ ಆರ್ ಶೆಟ್ಟಿ. ಬಂಟ್ವಾಳ ಮಂಡಲದ ಪ್ರಮುಖರಾದ ಪುಷ್ಪರಾಜ್ ಚೌಟ ಅಭಿಷೇಕ್ ರೈ ಆನಂದ ಎ ಶಂಬೂರು ಜಿನರಾಜ್ ಕೋಟ್ಯಾನ್ ಪಂಚಾಯತ್ ಅಧ್ಯಕ್ಷರಾದ ಪ್ರೇಮಕ್ಕ ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕರುಗಳಾದ ಪ್ರಭಾಕರ ಶೆಟ್ಟಿ ಬೈದರಡ್ಕ, ಮಹಾಬಲ ಸಾಲಿಯನ್ ಮೂಳಿಕೊಡಂಗೆ, ಬಂಟ್ವಾಳ ಮಂಡಲದ ಯುವ ಮೋರ್ಚ ಕಾರ್ಯದರ್ಶಿ ಕೌಶಿಲ್ ಶೆಟ್ಟಿ ಬಾಳಿಕೆ,ಬಂಟ್ವಾಳ ಮಂಡಲದ ಓಬಿಸಿ ಮೋರ್ಚ ಕಾರ್ಯದರ್ಶಿ ಯತೀಶ್ ಮೂಳಿಕೊಡಂಗೆ, ಆಮ್ಟೂರು ಶಕ್ತಿ ಕೇಂದ್ರ ಪ್ರಮುಖರಾದ ಪ್ರವೀಣ್ ಕುಮಾರ್ ರಾಯಪ್ಪ ಕೋಡಿ, ಅಮ್ಟೂರು ಶಕ್ತಿ ಕೇಂದ್ರದ ಪ್ರಭಾರಿಗಳಾದ ಸಂಪತ್ ಕೋಟ್ಯಾನ್ ಕಡೆ ಶಿವಾಲಯ ಹಾಗೂ ಬೂತ್ ಅಧ್ಯಕ್ಷರುಗಳಾದ ಶೇಖರ್ ಕೊಟ್ಟಾರಿ, ಸತೀಶ್ ಪೂಜಾರಿ, ಬೂತ್ ಕಾರ್ಯದರ್ಶಿಗಳಾದ ಸಂದೀಪ್ ಶೆಟ್ಟಿ ಬೈದರಡ್ಕ ದಾಮೋದರ ಪೂಜಾರಿ, ಪ್ರಮುಖರಾದ ಗೋಪಾಲಕೃಷ್ಣ ಪೂವಳ, ನವೀನ್ ಕೊಟ್ಟಾರಿ,ಜಯಂತಗೌಡ, ರಮೇಶ್ ಕರಿಂಗಾಣ,ಉಮೇಶ್ ಟಿ ಪೂಜಾರಿ ಗಂಗಾಧರ ಕುಲಾಲ್,ಮೋಹನ್ ಕುಲಾಲ್, ಜಯಶ್ರೀ ಕಲ್ಲಡ್ಕ ದೇವಕಿ ದಿವಾಕರ ಪೂಜಾರಿ,ಸುಮಾ ಶ್ರೀಧರ ಪೂಜಾರಿ,ಪ್ರಮೀಳಾ ವಸಂತ ಪೂಜಾರಿ ,ತ್ರಿವೇಣಿ ದಿನೇಶ್ ರಾಕೇಶ್ ಬಜಾರ್ ಹಾಗೂ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts