ಎರಡು ವರ್ಷಗಳಾದವು. ಕಂಪೌಂಡ್ ಕುಸಿದ ಕುರಿತು ಎಲ್ಲ ಮಾಧ್ಯಮಗಳಲ್ಲೂ ವರದಿಗಳು ಪ್ರಕಟಗೊಂಡಿದ್ದವು. ಬಿ.ಮೂಡ ಅಜ್ಜಿಬೆಟ್ಟು ಶಾಲೆ ಎಂದೇ ಖ್ಯಾತಿ ಗಳಿಸಿದ ಶತಮಾನಕ್ಕೆ ಸನಿಹ ಇರುವ ಈ ಶಾಲೆಯ ಗೇಟ್ ಕುಸಿದದ್ದು, ಕಂಪೌಂಡ್ ಕುಸಿದ ವಿಚಾರಕ್ಕೆ ಸಂಬಂಧಿಸಿ ಶಾಲೆಯಿಂದ ಸಾಕಷ್ಟು ಅರ್ಜಿಗಳು ಸಂಬಂಧಪಟ್ಟವರಿಗೆ ತಲುಪಿದವು. ಆದರೆ ಇನ್ನೂ ಕಂಪೌಂಡ್ ನಿರ್ಮಾಣವಾಗಲೇ ಇಲ್ಲ. ಈ ಮಧ್ಯೆ ಮತ್ತೆ ಮಳೆಗಾಲ ಕಾಲಿಟ್ಟಿದೆ.
ಹೀಗಾಗಿ ಶಾಲಾ ಆವರಣ ಸುರಕ್ಷಿತವಾಗಿ ಉಳಿದಿಲ್ಲ. ಶೌಚಾಲಯ ಕಂಪೌಂಡ್ ಸಮೀಪವೇ ಇದೆ. ಶಾಲಾ ಆವರಣದಿಂದ ಸ್ವಲ್ಪ ದೂರದಲ್ಲಿರುವ ಶೌಚಾಲಯ ಹಳೆಯದ್ದು. ಮಳೆಗಾಲದಲ್ಲಿ ಮಕ್ಕಳು ಅಲ್ಲಿ ತೆರಳಲು ಸಾಕಷ್ಟು ತೊಂದರೆ ಅನು‘ವಿಸುತ್ತಿದ್ದಾರೆ. ವಿಶೇಷವಾಗಿ ಎಲ್‌ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಗೆ ಶಾಲಾ ಕಟ್ಟಡದ ಸಮೀಪ ಪ್ರತ್ಯೇಕ ಶೌಚಾಲಯ ನಿರ್ಮಾಣದ ಅಗತ್ಯವಿದೆ. ಬಿಸಿಯೂಟ ಕೊಠಡಿ ಪುನರ್ನಿರ್ಮಾಣಗೊಳ್ಳುವ ಅಗತ್ಯವಿದೆ.