ಬಂಟ್ವಾಳ: ಬಂಟ್ವಾಳದ ಎಸ್.ವಿ.ಎಸ್. ದೇವಳ ಆಂಗ್ಲ ಮಾಧ್ಯಮ ಶಾಲೆಗೆ ಈ ಬಾರಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ದೊರಕಿದೆ.
ದ್ರುವಿ ಬಿ. 618 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾಳೆ. ಸಂಜಯ್ ಶರ್ಮಾ ಹಾಗೂ ಗಗನ್ ಆಳ್ವ 616 ಅಂಕ ಗಳಿಸಿ ದ್ವಿತೀಯ ಸ್ಥಾನಿಯಾಗಿದ್ದಾರೆ.
ಸಾನ್ವಿ ಜಿ. ರಾವ್ 611,
ರಿಧಿ ಶೆಟ್ಟಿ 610,
ಶ್ರಿಶಾನ್ ಎಚ್. 606,
ಆತ್ಮಿಕಾ ಎ.ಎಸ್. ಬಂಟ್ವಾಳ 605,
ಪ್ರಾಬಲ್ಯ ಕೆ. ಜೈನ್ 604,
ಸುಹಾನ್ ಜೆ. ಶೆಟ್ಟಿ 604,
ಪ್ರಜ್ಞಾ ಅಮೀನ್ 603,
ಧೃತಿ ರಾಘವ 600, , ಅಂಕ ಗಳಿಸಿದ್ದಾರೆ.
ಒಟ್ಟು 127 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಶಾಲೆಗೆ ಶೇಕಡಾ 100 ಫಲಿತಾಂಶ ಬಂದಿರುತ್ತದೆ., ಇವರಲ್ಲಿ 88 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 39 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಹಾಗೆಯೇ ಶಾಲೆಗೆ ’ಎ’ ಗ್ರೇಡ್ ಬಂದಿರುತ್ತದೆ. ಎಲ್ಲಾವಿದ್ಯಾರ್ಥಿಗಳಿಗೆ ಶ್ರೀ ದೇವಳದ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯಿನಿ, ಶಿಕ್ಷಕ-ಶಿಕ್ಷಕೇತರ ವೃಂದದವರು ಶುಭ ಹಾರೈಸಿದ್ದಾರೆ.
| ದ್ವಿತೀಯ ಪಿಯುಸಿ: ಸರಕಾರಿ ಕಾಲೇಜುಗಳ ಸಾಧಕರಿಗೆ ಸನ್ಮಾನ (more…)