ಪುಂಜಾಲಕಟ್ಟೆ

ಮನೆ ಮೇಲ್ಛಾವಣಿ ದುರಸ್ತಿಗೊಳಿಸಿದ ಶೌರ್ಯ ವಿಪತ್ತು ನಿರ್ವಹಣಾ ಘಟಕ

ಬಂಟ್ವಾಳ ತಾಲೂಕಿನ ಕಾಡಬೆಟ್ಟು ಗ್ರಾಮದ ರಾಮಕ್ಕು ಅವರದ್ದು ಬಡ ಕುಟುಂಬ. ಇವರ ಮನೆ ಮೇಲ್ಛಾವಣಿ ರಿಪೇರಿಗೆ ಹಣ ಹೊಂದಿಸಲಾಗದೆ ಕಷ್ಟ ಪಡುತ್ತಿದ್ದರು. ಇದನ್ನು ಗಮನಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಗ್ಗ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕ ಸದಸ್ಯರು ಶ್ರಮದಾನದ ಮೂಲಕ ನೆರವಾದ ಘಟನೆ ನಡೆಯಿತು.

ಬಂಟ್ವಾಳ ತಾಲೂಕಿನ ಕಾಡಬೆಟ್ಟು ಗ್ರಾಮದ ರಾಮಕ್ಕು ಅವರ ಬೈರ್ಲಚ್ಚಿಲ್ ಮನೆಯ ಮೇಲ್ಛಾವಣಿ ರಿಪೇರಿ ಊರವರ ಸಹಕಾರದೊಂದಿಗೆ ಯಶಸ್ವಿಯಾಯಿತು. ಪಂಚಾಯತ್ ಮಾಜಿ ಅಧ್ಯಕ್ಷರಾದ ಸುಜಿತ್ ಜೈನ್, ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು, ಶೌರ್ಯ ತಂಡದ ಸದಸ್ಯರಾದ ಜನಾರ್ದನ್ ಸಲಕರಣೆ ನೀಡಿ ಸಹಕರಿಸಿದರು. ತಾಲೂಕು ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷರಾದ ರೊನಾಲ್ಡ್ ಡಿಸೋಜಾ ಊಟೋಪಹಾರ ನೀಡಿ ಸಹಕರಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಕೃಷಿ ಅಧಿಕಾರಿ ಭಾಸ್ಕರ್,ಮದ್ವ ಒಕ್ಕೂಟದ ಸೇವಪ್ರತಿನಿಧಿ ಸುಮಿತ್ರ ಉಪಸ್ಥಿತರಿದ್ದರು.

ಶ್ರಮದಾನ ಸೇವೆಯಲ್ಲಿ ಘಟಕ ಪ್ರತಿನಿಧಿ ಪ್ರವೀಣ್, ಸಂಯೋಜಕಿ‌ ರೇಖಾ.ಪಿ. ಸದಸ್ಯರುಗಳಾದ ಸಂಪತ್ ಶೆಟ್ಟಿ ರೋಹಿತ್ ಮಹಾಬಲ ರೈ ಅಶೋಕ ಹಾರೋದ್ದು ಮೋಹಾನಂದ, ಅಶೋಕ ಬೊಲ್ಮರ್,  ನಾರಾಯಣ ಪೂಜಾರಿ, ನಾರಾಯಣ ಶೆಟ್ಟಿ ಲಕ್ಷ್ಮಣ, ಜನಾರ್ದನ, ಶಶಿಕಲಾ, ಪವಿತ್ರ, ಧನುಪೂಜೆ ಶೌರ್ಯ ತಂಡ ಘಟಕದ ಸದಸ್ಯರುಗಳಾದ ಗಣೇಶ್ ಆಚಾರ್ಯ, ದಿನೇಶ್ ಆಚಾರ್ಯ,ಪ್ರಶಾಂತ್, ಪ್ರಮೋದ್ ಆಚಾರ್ಯ, ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.