ದಕ್ಷಿಣ ಕನ್ನಡ ಜಿಲ್ಲೆಯ ಕರೋಪಾಡಿಯ ಪದ್ಯಾಣ ಶ್ರೀ ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಮಾರ್ಚ್ 30ರಿಂದ ಏಪ್ರಿಲ್ ೬ರವರೆಗೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಸಂಪನಗೊಂಡವು.
ಬೆಳಗ್ಗೆ 7ರಿಂದ ಗಣಪತಿ ಹೋಮ ಪಂಚಾಮೃತಾಭಿಷೇಕ, ಶಾಂತಿಹೋಮಾದಿಗಳ ಕಲಶಾಭಿಷೇಕ, ತತ್ವಕಲಶಾಭಿಷೇಕ, ಕುಂಭೇಶ ಕಲಶಾಭಿಷೇಕ, ಪರಿಕಲಶ ಸಹಿತ ದ್ರವ್ಯ ಕಲಶಾಭಿಷೇಕ, ಶತರುದ್ರ ಸಹಿತ ಬ್ರಹ್ಮಕುಂಭಾಭಿಷೇಕ, ಮಂತ್ರನ್ಯಾಸಾದಿಗಳು, ಮಹಾಬಲಿ ಪೀಠ ಪ್ರತಿಷ್ಠೆ, ಮಹಾಮಂಗಳಾರತಿ, ವೈದಿಕ ಮಂತ್ರಾಕ್ಷತೆ, ಸಂತರ್ಪಣೆ ನಡೆಯಿತು. ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಉಪಸ್ಥಿತಿಯಲ್ಲಿ ಕಾರ್ಯಕ್ರಮಗಳು ಸಂಪನ್ನಗೊಂಡವು.
ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿ, ಪದ್ಯಾಣ ಶ್ರೀ ಮಹಾಲಿಂಗೇಶ್ವರ ಸನ್ನಿಧಿ ಕೈಲಾಸ ಸದೃಶವಾದುದು. ಜೀವನವೆಂದರೆ ಕಳೆದುಕೊಳ್ಳಬೇಕಾದದ್ದನ್ನು ಕಳೆದುಕೊಳ್ಳುವುದು. ನಾವಿರುವಲ್ಲಿಂದ ಮೊದಲು ಸಿಗುವ ದೇವರು. ಯಾರೆಲ್ಲ ಬ್ರಹ್ಮಕಲಶೋತ್ಸವ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಅವರಿಗೆಲ್ಲ ಶ್ರೇಯಸ್ಸಾಗಲಿ ಎಂದರು.
ಗೌರಿಗದ್ದೆ ಅವಧೂತ ವಿನಯ ಗುರೂಜಿ ಆಶೀರ್ವಚನ ನೀಡಿ ಒಂದು ಮಠ ಗಟ್ಟಿ ಇದ್ರೆ ಊರು ಉಳಿಯುತ್ತದೆ. ನಾನು ಅನ್ನುವ ಅಹಂಕಾರ ಕಳೆದುಕೊಳ್ಳುವುದು ಸನ್ಯಾಸ. ಜಗತ್ತಿನ ಶಂಕೆಯನ್ನು ನಿವಾರಿಸಲು ಶಂಕರಾಚಾರ್ಯರು ಜನಿಸಿದರು ಎಂದರು. ಸಾಮೂಹಿಕ ವಿವಾಹಗಳನ್ನು ದೇವಸ್ಥಾನಗಳು ಏರ್ಪಡಿಸಿದರೆ ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ ಎಂದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಕೈರಂಗಳ ಶ್ರೀ ಶಾರದಾಗಣಪತಿ ವಿದ್ಯಾಕೇಂದ್ರ ಅಧ್ಯಕ್ಷ ಟಿ.ಜಿ.ರಾಜಾರಾಮ ಭಟ್, ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಮೊಕ್ತೇಸರ ಮುಳ್ಳುಂಜ ವೆಂಕಟೇಶ್ವರ ಭಟ್, ಮುಳಿಯ ಗೋಲ್ಡ್ ನ ಕೇಶವ ಪ್ರಸಾದ್ ಮುಳಿಯ, ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಹಿರಿಯ ವಕೀಲ ಎಸ್.ಎಂ.ಭಟ್, ಉಪ್ಪಿನಂಗಡಿ ರಾಜ್ ಗ್ರೂಪ್ಸ್ ನ ಕೃಷ್ಣರಾಜ್, ಕಾಕುಂಜೆ ಸಾಫ್ಟ್‌ವೇರ್ ನ ಗೋಪಾಲಕೃಷ್ಣ ಭಟ್ , ಉದ್ಯಮಿ ಉಜ್ವಲ್ ಪ್ರಭು, ಅತಿಥಿಗಳಾಗಿ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ಅರುಣಶ್ಯಾಮ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅರವಿಂದ ಪದ್ಯಾಣ, ಆಡಳಿತ ಮೊಕ್ತೇಸರ ಸೇರಾಜೆ ಸತ್ಯನಾರಾಯಣ ಭಟ್, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷಾದ ಪದ್ಯಾಣ ತಿಮ್ಮಣ್ಣ ಭಟ್ಟ ಅಭಿರಾಮ, ಪದ್ಯಾಣ ರಘುರಾಮ ಕಾರಂತ,
ಸಂಘಟನಾ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಅನೆಯಾಲಗುತ್ತು, ಕಾರ್ಯದರ್ಶಿ ಕೃಷ್ಣ ಎಂ.ಆರ್. ಕಡಬ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಈಶಾನ್ಯ ಪದ್ಯಾಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಟಿ.ಶ್ಯಾಮ ಭಟ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ರಾಘವೇಶ್ವರ ಭಾರತೀ ಸ್ವಾಮೀಜಿ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಬ್ರಹ್ಮಕಲಶೋತ್ಸವ ಸಂದರ್ಭ ಅವರ ಉಪಸ್ಥಿತಿ ನಮ್ಮ ವಿಶ್ವಾಸ ಹೆಚ್ಚಿಸಿದೆ ಎಂದರು. ಡಾ.ಪ್ರವೀಣ ಪದ್ಯಾಣ ವಂದಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶ್ಯಾಮ ಸುದರ್ಶನ ಹೊಸಮೂಲೆ ಮತ್ತು ನವ್ಯಕೃಷ್ಣ ಮಾಣಿಪ್ಪಾಡಿ ವಂದಿಸಿದರು.