???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಬಂಟ್ವಾಳ ಆಶ್ರಯದಲ್ಲಿ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಮ್ 119 ಜನ್ಮದಿನಾಚರಣೆ ಬಿಸಿರೋಡಿನ ತಾಲೂಕು ಪಂಚಾಯಿತಿ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ನಡೆಯಿತು.
ಬಂಟ್ವಾಳ ತಹಸೀಲ್ದಾರ್ ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂವಿಧಾನ ಮೂಲಕ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟವರು ಬಾಬೂಜಿಯಂಥ ಹಿರಿಯರು. ಪಠ್ಯಪುಸ್ತಕಗಳ ಜೊತೆ ಸಾಧಕರ ಜೀವನಚರಿತ್ರೆ ಓದುವಿಕೆಯೂ ಮುಖ್ಯ. ಇವರ ಆದರ್ಶ ಪಾಲನೆಯೂ ಅಗತ್ಯ ಎಂದರು.
ಬಾಬೂಜಿಯವರು ಸಿಹಿಯಾದ ಸಕ್ಕರೆಯಂತೆ. ಅವರ ಸಂದೇಶವನ್ನು ಸ್ಮರಿಸಿ, ಉತ್ತಮ ಸಮಾಜ ನಿರ್ಮಾಣಕ್ಕೆ ತೊಡಗೋಣ. ನಾವೆಲ್ಲರೂ ಮಾನವರಾಗೋಣ ಎಂದು ನಾರ್ಶ ಹೈಸ್ಕೂಲ್ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ನೇರಳಕಟ್ಟೆ ಹೇಳಿದರು.
ಮುಖಂಡರಾದ ಬೇಬಿ ಮೈರಾನ್ ಪಾದೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ, ಮುಖ್ಯಾಧಿಕಾರಿ ತೀರ್ಥಪ್ರಸಾದ್ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಿನಯಕುಮಾರಿ ಸ್ವಾಗತಿಸಿದರು. ಸಿಬ್ಬಂದಿ ಪ್ರಸಾದ್ ವಂದಿಸಿದರು.
(more…)