ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳಲ್ಲಿ ಏಪ್ರಿಲ್ 2ರಂದು ನಡೆಯುವ ಕಾರ್ಯಕ್ರಮಗಳು ಇವು.
ವೈದಿಕ ಕಾರ್ಯಕ್ರಮಗಳು: ಬೆಳಗ್ಗಿನ ಪೂಜೆ, ಗಣಪತಿ ಹೋಮ, ಅಂಕುರ ಪೂಜೆ, ಮಧ್ಯಾಹ್ನ ಪೂಜೆ, ಸಂಹಾರ ತತ್ವಹೋಮ, ಸಂಹಾರ ತತ್ವಕಲಶ, ಶಯ್ಯಾ ಮಂಟಪದಲ್ಲಿ ಕುಂಭೇಶ ಕರ್ಕರಿ ಕಲಶ ಪೂಜೆ, ವಿದ್ಯೇಶ್ವರ ಕಲಶ ಪೂರಣೆ, ನಿದ್ರಾ ಕಲಶ ಪೂರಣೆ, ಅಗ್ನಿ ಜನನ, ಬಿಂಬ ಶುದ್ಧಿಕಲಶ ಪೂರಣೆ, ಶ್ರೀ ದೇವರಿಗೆ ಸಂಹಾರ ತತ್ವ ಕಲಶಾಭಿಷೇಕ, ಜೀವಕಲಶ ಪೂರಣೆ, ಜೀವೋದ್ವಾಸನ ಕ್ರಿಯೆ, ಜೀವ ಕಲಶವನ್ನು ಶಯ್ಯೆಯಲ್ಲಿಡುವುದು. ಸಂಜೆ 5ರಿಂದ ಅಂಕುರ ಪೂಜೆ, ಸ್ವಸ್ತಿ ಪುಣ್ಯಾಹವಾಚನ, ವಾಸ್ತುಪೂಜೆ, ಬಿಂಬ ಶುದ್ಧಿಕಲಶಾಭಿಷೇಕ, ಶಿರಸ್ತತ್ವಹೋಮ, ಶಾಂತಿಹೋಮ, ಧ್ಯಾನಾಧಿವಾಸ ಕ್ರಿಯೆ, ಭದ್ರಕಮಂಡಲ ಪೂಜೆ, ಅಧಿವಾಸ ಹೋಮ, ಶಯ್ಯೆಯಲ್ಲಿ ರಾತ್ರಿಪೂಜೆ, ಅಧಿವಾಸ ಬಲಿ, ಶಕ್ತಿಪೂಜೆ, ರತ್ನನ್ಯಾಸ, ಪೀಠಾಧಿವಾಸ, ಪ್ರಾಸಾದ ಅಧಿವಾಸ.
ಕಾರ್ಯಕ್ರಮಗಳು:
ಬೆಳಗ್ಗೆ 8.30ರಿಂದ ಚಿಪ್ಪಾರು ಶ್ರೀಜ್ಯೇಷ್ಠರಾಜ ಭಜನಾ ಮಂಡಳಿ, ಬಾಯಾರು ಶ್ರೀ ಸತ್ಯಸಾಯಿ ಸೇವಾ ಸಮಿತಿಯಿಂದ ಭಜನಾ ಕಾರ್ಯಕ್ರಮ. ಬೆಳಘ್ಗೆ 9.30ರಿಂದ ರಜನ್ ವಗೆನಾಡು ಮತ್ತು ಬಳಗದ ಭಕ್ತಿ ಸಂಗೀತ. ಬೆಳಗ್ಗೆ 11.30ರಿಂದ ಮಚ್ಚೇಂದ್ರನಾಥ ಕನ್ಯಾನ ಮತ್ತು ಸಂಗಡಿಗರಿಂದ ಸ್ಯಾಕ್ಸೋಫೋನ್ ಕಛೇರಿ. ಮಧ್ಯಾಹ್ನ 1.30ರಿಂದ ಕುರಿಯು ಗಣಪತಿ ಶಾಸ್ತ್ರಿಗಳ ನೇತೃತ್ವದಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ. ಪ್ರಸಂಗ ಸಂಜಯ ರಾಯಭಾರ.
ಸಂಜೆ 4.30ರಿಂದ ಸುಧರ್ಮ ಸಭೆ ನಡೆಯಲಿದೆ. ಶ್ರೀ ಭೀಮನಕಟ್ಟೆ ಮಠದ ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದರಿಂದ ಆಶೀರ್ವಚನ ನೀಡುವರು, ಹಿರಿಯ ವೈದಿಕ ವಿದ್ವಾಂಸ ಬೋಳಂತಕೋಡಿ ರಾಮ ಭಟ್ ದೀಪಪ್ರಜ್ವಲನ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ವಹಿಸುವರು. ಹೊರನಾಡು ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮದರ್ಶಿ ರಾಮನಾರಾಯಣ ಜೋಷಿ ಧಾರ್ಮಿಕ ಉಪನ್ಯಾಸ ನೀಡುವರು. ಮಾಜಿ ಸಚಿವ ಬಿ.ರಮಾನಾಥ ರೈ ಶುಭಾಶಂಸನೆ ನೀಡುವರು. ಶ್ರೀ ಕ್ಷೇತ್ರ ನಂದಾವರದ ಪ್ರಧಾನ ಅರ್ಚಕ ವೇ.ಮೂ.ಮಹೇಶ ಭಟ್, ವಿಟ್ಲ ಅರಮನೆಯ ಬಂಗಾರ ಅರಸರ ಗೌರವ ಉಪಸ್ಥಿತಿ ಇರಲಿದೆ. ಅಭ್ಯಾಗತರಾಗಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕರ್ಣಾಟಕ ಬ್ಯಾಂಕ್ ಸಿಇಒ ಮತ್ತು ಎಂ.ಡಿ. ರಾಘವೇಂದ್ರ ಭಟ್, ಉದ್ಯಮಿ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ, ಮೈಸೂರ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಉದ್ಯಮಿ ಅಜಯ್ ಪುರುಷೋತ್ತಮ ಶೆಟ್ಟಿ, ಉದ್ಯಮಿ ಧನಂಜಯ ಶೆಟ್ಟಿ, ಕೆಎಂಎಫ್ ನಿರ್ದೇಶಕ ಸುಧಾಕರ ರೈ ಭೋಳಂತೂರು, ಮುಖಂಡರಾದ ಸಾಜ ರಾಧಾಕೃಷ್ಣ ಆಳ್ವ, ಉದ್ಯಮಿ ಉಜ್ವಲ್ ಪ್ರಭು, ನಂದಾವರ ಕ್ಷೇತ್ರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕಾಂತಾಡಿಗುತ್ತು, ಚಿಪ್ಪಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ನಿಕಟಪೂರ್ವ ಅಧ್ಯಕ್ಷ ಸೀತಾರಾಮ ಬಲ್ಲಾಳ್, ಬನಾರಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ನಿರ್ವಹಣಾ ಸಮಿತಿ ಅಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ, ಬಿಜೆಪಿ ಬಂಟ್ವಾಳ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್ ಭಾಗವಹಿಸುವರು. ಬಳಿಕ ಸೂರ್ಯಗಾಯತ್ರಿ ಅವರಿಂದ ಭಕ್ತಿಗಾನ ಸಂಭ್ರಮ ನಡೆಯಲಿದೆ.