ಫರಂಗಿಪೇಟೆ

ತಲೆಂಬಿಲ: ಯುವಕೇಸರಿ ಗೆಳೆಯರ ಬಳಗ ವಾರ್ಷಿಕೋತ್ಸವ

ಬಂಟ್ವಾಳ :ಯುವಕೇಸರಿ ಗೆಳೆಯರ ಬಳಗತಲೆಂಬಿಲ, ಅಮ್ಟಾಡಿ ಇದರ 12ನೇ ವಾರ್ಷಿಕೋತ್ಸವ ಸಮಾರಂಭ ಮಾ.28ರಂದು ಶನಿವಾರ ಮನೆಜಾಲು ಎಂಬಲ್ಲಿ ವಿಜೃಂಭಣೆಯಿಂದ ನಡೆಯಿತು.

ಸಮಾರಂಭದಲ್ಲಿ ಪುದು ಶ್ರೀ ರಾಧಾ ಸುರಭಿ ಗೋ ಮಂದಿರದ ಶ್ರೀ ಭಕ್ತಿಭೂಷಣದಾಸ ಪ್ರಭೂಜೀ ಆಶೀರ್ವಚನ ನೀಡಿ, ಭಾರತದ ಸನಾತನ ಧರ್ಮ ಎಲ್ಲಾ ಧರ್ಮಗಳ ಮೂಲ. ಸನಾತನ ಧರ್ಮದ ರಕ್ಷಣೆಯಾದರೆ ವಿಶ್ವಕ್ಕೆ ಶಾಂತಿ ಸಾಧ್ಯ,ಇಂದು ನಮ್ಮ ಯುವಜನತೆ ಪಶ್ಚಾತ್ಯ ಸಂಸ್ಕೃತಿಯನ್ನು ಅನುಕರಿಸಿ ನಮ್ಮ ಧರ್ಮದ ಆಚರಣಾ ಪದ್ದತಿಯನ್ನು ಮರೆಯುತ್ತಿರುವುದು ವಿಷಾದನೀಯ, ಪರಿಣಾಮವಾಗಿ ಜೀವನದಲ್ಲಿ ಆತಂಕ, ಒತ್ತಡ, ದುಷ್ಟ ಚಟ, ಮೊಬೈಲ್ ಗೀಲಿಗೆ ಬಲಿಯಾಗುತ್ತಿದ್ದಾರೆ. ನಮ್ಮ ಮಕ್ಕಳಿಗೆ ಕಡ್ಡಾಯವಾಗಿ ಮಹಾಭಾರತ, ಭಾಗವತ ಪಾರಾಯಣ ಮಾಡಿಸಬೇಕು, ಸಂಸ್ಕೃತಿ, ಸಂಸ್ಕಾರ ಕಳಿಸಿ ಧರ್ಮದ ಹಾದಿಯಲ್ಲಿ ಸಾಗಲು ಕಲಿಸಬೇಕಿದೆ ಎಂದರು.

ಮುಖ್ಯ ಅತಿಥಿ ನಿವೃತ್ತ ಸೈನಿಕ ಪ್ರಕಾಶ್ ಸಿ. ಪೂಜಾರಿ ಹಾಗೂ ಸೇವಾ ಜಾಗರಣ ಪ್ರಮುಖ ಜಗದೀಶ್ ನೆತ್ತರಕೆರೆ ಮಾತನಾಡಿದರು.

ಜಾಹೀರಾತು

ಈ ಸಂದರ್ಭದಲ್ಲಿ ಸಾಧಕರಾದ ನಿವೃತ್ತ ಸೈನಿಕ ಪ್ರಕಾಶ್ ಸಿ. ಪೂಜಾರಿ ಹಾಗೂ ಚಾಮುಂಡೇಶ್ವರೀ ಸೌಡ್ಸ್ & ಲೈಟಿಂಗ್ಸ್ ಮಾಲಕ ರಾಜೀವ ಕೈಕಂಬ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸನ್‌ರೈಸ್ ಆರ್ಟ್ಸ್ & ಡೆಕೊರೇಟರ್ಸ್ ಮಾಲಕ ಸಂತೋಷ್ ಪಚ್ಚಿನಡ್ಕ, ಹರಿಯಪ್ಪ ಕುಲಾಲ್, ಹರೀಶ್  ತಲೆಂಬಿಲ ಉಪಸ್ಥಿತರಿದ್ದರು.

ಕುಮಾರಿ ಹರ್ಷ ಸ್ವಾಗತಿಸಿ ಪುರುಷೋತ್ತಮ್ ಕೊಯಿಲ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಮನೋರಂಜನ ಕಾರ್ಯಕ್ರಮ ಹಾಗೂ ನಮ್ಮ ಕಲಾವಿದೆರ್ ಬೆದ್ರ ಇವರಿಂದ ವೈರಲ್ ವೈಶಾಲಿ ತುಳು ಹಾಸ್ಯ ನಾಟಕ ಪ್ರದರ್ಶನಗೊಂಡಿತು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.