ಲಯನ್ಸ್ ಕ್ಲಬ್ ಬೆಂಜನಪದವು ತೊಡಂಬಿಲ ಸಹಕಾರದಿಂದ ತೊಡಂಬಿಲ ಪರಿಸರದಲ್ಲಿ ದಿ. ಜೆಫ್ರಿ ಮೊಂತೇರೊ ಹಾಗೂ ದಿ. ಡೆನಿಸ್ ಗೋಮ್ಸ್ ಸ್ಮರಣಾರ್ಥ 60 ಸಾವಿರ ರೂ ವೆಚ್ಚದಲ್ಲಿ ರೂಪುಗೊಂಡ ಸಾರ್ವಜನಿಕ ಬಸ್ಸು ತಂಗುದಾಣವನ್ನು ತೊಡಂಬಿಲ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾ. ಅಂಟೋನಿ ಲೋಬೊ ಆಶೀರ್ವಚನದಿಂದ ಲೋಕಾರ್ಪಣೆಗೊಂಡಿತು.
ಎರಡೂ ಕುಟುಂಬದ ಸದಸ್ಯರು , ಕ್ಲಬ್ ಅಧ್ಯಕ್ಷರಾದ ಜೇಸನ್ ಸಂತೋಷ್ ಮೊಂತೇರೊ, ಲಯನ್ ಜಿಲ್ಲಾ ವಿಸ್ತರಣಾಧಿಕಾರಿಯಾದ ಸಿರಿಲ್ ಡಿಸೋಜ ಹಾಗೂ ಕ್ಲಬ್ ನ ಪದಾಧಿಕಾರಿಗಳು ,ಸದಸ್ಯರು ಹಾಜರಿದ್ದರು.ಲಯನ್ ಪ್ರವೀಣ್ ಮೊಂತೇರೊ ಕಾರ್ಯಕ್ರಮ ನಿರೂಪಿಸಿದರು.