ಬೆಂಜನಪದವು-ತೊಡಂಬಿಲದ ಲಯನ್ಸ್ ಕ್ಲಬ್ ಘಟಕದ ಸೇವಾ ಚಟುವಟಿಕೆಯ ಭಾಗವಾಗಿ ಅಮುಂಜೆ ಗ್ರಾಮದ ಮೇರಿ ಡಿಸೋಜ ಅವರ ಶಿಥಿಲಾವಸ್ಥೆಯಲ್ಲಿದ್ದ ಮನೆಯನ್ನು 4.5 ಲಕ್ಷ ರೂ ವೆಚ್ಚದಲ್ಲಿ ದುರಸ್ತಿಗೊಳಿಸಲಾಯಿತು. ಬಳಿಕ ಮನೆಗೆ ಆಸರೆ ಎಂಬ ಹೆಸರಿಟ್ಟು ಹಸ್ತಾಂತರಿಸಲಾಯಿತು.
ತೊಡಂಬಿಲ ಚರ್ಚ್ ಹಾಗೂ ಬೆಳ್ಳೂರು ಚರ್ಚಿನ ಧರ್ಮ ಗುರುಗಳು ನವೀಕೃತ ಮನೆಯನ್ನು ಆಶೀರ್ವಚನಗೈದರು.
ಮೊಂತು ಫೆರ್ನಾಂಡಿಸ್ ಸ್ವಾಗತಿಸಿದರು. ಅದ್ಯಕ್ಷ ಜೇಸನ್ ಸಂತೋಷ್ ಮೊಂತೇರೊ ಮಾತನಾಡಿ ಸಮಾಜದ ಅಶಕ್ತರ ಕಣ್ಣೀರು ಒರಸಿ ಕೈಗಳನ್ನು ಬಲಪಡಿಸಲು ಸಹಕರಿಸುವ ಎಲ್ಲರನ್ನು ಸ್ಮರಿಸಿ ಮುಂದೆಯೂ ಇಂತಹ ಸೇವಾ ಚಟುವಟಿಕೆಗಳು ನಿರಂತರವಾಗಿ ನಡೆಯಲೆಂದು ಆಶಿಸಿದರು. ವಿಜಯ್ ರವಿ ಕಾರ್ಯಕ್ರಮ ನಿರೂಪಿಸಿದರು.