ಬಂಟ್ವಾಳ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಜಾಗದಲ್ಲಿ ಇಟ್ಟಿದ್ದ ದ್ವಿಚಕ್ರ ವಾಹನ ಕಳವಾಗಿರುವ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಈ ಕುರಿತು ಅಬ್ದುಲ್ ಜಬ್ಬಾರ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಮೂಲತಃ ಉಳ್ಳಾಲ ತಾಲೂಕಿನವರಾದ ಅವರು ಬೆಂಗಳೂರಿನಲ್ಲಿ ವ್ಯಾಪಾರ ಮಾಡಿಕೊಂಡಿದ್ದು, ಫೆ.10ರಂದು ಸುಮಾರು 7.30ಕ್ಕೆ ರಾತ್ರಿ ಬಿ.ಮೂಡ ಗ್ರಾಮದ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಜಾಗದಲ್ಲಿ ದ್ವಿಚಕ್ರ ವಾಹನವನ್ನು ಪಾರ್ಕ್ ಮಾಡಿ ರೈಲಿನಲ್ಲಿ ಬೆಂಗಳೂರಿಗೆ ಹೋಗಿದ್ದರು. 13ರಂದು ಬೆಳಗ್ಗೆ ರೈಲಿನಲ್ಲಿ ಊರಿಗೆ ಮರಳಿದ ವೇಳೆ ದ್ವಿಚಕ್ರ ವಾಹನ ಕಾಣಿಸದೇ ಇದ್ದು ಕಳವಾಗಿರುವ ಹಿನ್ನೆಲೆಯಲ್ಲಿ ದೂರು ನೀಡಿದ್ದಾರೆ.
| ಬಿ.ಸಿ.ರೋಡಿನಲ್ಲಿ ಸಮಾಲೋಚನಾ ಸಭೆ | ಹೋರಾಟ ಸಮಿತಿ ಅಸ್ತಿತ್ವಕ್ಕೆ (more…)