??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
ಬಂಟ್ವಾಳ: ಲಯನ್ಸ್ ಇಂಟರ್ನ್ಯಾಷನಲ್ ಪ್ರಾಂತ್ಯ-6ರ ಪ್ರಾಂತೀಯ ಸಮ್ಮಿಲನ ಕಾರ್ಯಕ್ರಮವು ಜ.31ರಂದು ಪ್ರಾಂತೀಯ ಅಧ್ಯಕ್ಷ ಉದ್ಯಮಿ ಬಾಲಕೃಷ್ಣ ಶೆಟ್ಟಿ ಪಿ. ಅಧ್ಯಕ್ಷತೆಯಲ್ಲಿ ಜ.31ರಂದು ಬಜಾರ್ ಆಡಿಟೋರಿಯಂ ಕಂದೂರು ಸಜಿಪಮೂಡದಲ್ಲಿ ನಡೆಯಲಿದೆ ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ಗಂಗಾಧರ ರೈ ಹೇಳಿದ್ದಾರೆ.
ಶುಕ್ರವಾರ ಸಂಜೆ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಲಯನ್ಸ್ ಕ್ಲಬ್ ಮಾಣಿ ಆತಿಥ್ಯದಲ್ಲಿ ಪ್ರಾಂತ್ಯದ ಕ್ಲಬ್ ಗಳ ಸಹಕಾರದಲ್ಲಿ ಸೇವಾ ಸಾರ್ಥಕ್ಯ ಮಾಣಿಕ್ಯ ಹೆಸರಿನಲ್ಲಿ ಸಮ್ಮೇಳನ ನಡೆಯಲಿದ್ದು ,ಸಾಮಾಜಿಕ ಸೇವೆಯಲ್ಲಿ ಸಾರ್ಥಕ್ಯ ಪಡೆದ ಹಿರಿಯರಾದ ಡಾ.ಗೋಪಾಲ ಆಚಾರ್ ಮಂಚಿ, ಬಾಲ ವಿಕಾಸ ಅಂಗ್ಲ ಮಾಧ್ಯಮ ಶಾಲೆಯ ಸಂಸ್ಥಾಪಕ ಪ್ರಹ್ಲಾದ ಶೆಟ್ಟಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ಪೀಟರ್ ಜೆರ್ರಿ ರೋಡ್ರಿಗಸ್, ವೈದ್ಯ ಡಾ.ಶ್ರೀನಾಥ್ ಆಳ್ವ ಪೆರಾಜೆಗುತ್ತು ಇವರನ್ನು ಸನ್ಮಾನಿಸಲಾಗುವುದು. ಬಂಟ್ವಾಳ, ಕೊಳ್ಳಾಡು ಸಾಲೆತ್ತೂರು,ಲೊರೆಟ್ರೋ ಅಗ್ರಾರ್,ವಾಮದಪದವು,ಅಮ್ಮೂರು,ರಾಯಿ ಸಿದ್ದಕಟ್ಟೆ, ತೊಡಂಬಿಲ ಬೆಂಜನಪದವು ಹಾಗೂ ಮಾಣಿ ಕ್ಲಬ್‌ಗಳು ತಮ್ಮ ಪರಿಸರದಲ್ಲಿ ವಾರ್ಷಿಕವಾಗಿ ಮಾಡಿರುವ ಸೇವಾ ಕಾರ್ಯಗಳನ್ನು ಗುರುತಿಸಿ ಪುರಸ್ಕರಿಸಲಾಗುವುದು. ಮಾಣಿಯಲ್ಲಿ ಲಯನ್ಸ್ ಸೇವಾ ಟ್ರಸ್ಟ್ ಸ್ಥಾಪನೆಯಾಗಿದ್ದು ಸ್ವಂತ ನಿವೇಶನ ಖರೀದಿಸಿ ಲಯನ್ಸ್ ಭವನ ನಿರ್ಮಾಣ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಸಮ್ಮೇಳನವನ್ನು ಪೂರ್ವ ಜಿಲ್ಲಾಗವರ್ನರ್ ಎಸ್ .ಸಂಜಿತ್ ಶೆಟ್ಟಿ ಉದ್ಘಾಟಿಸಲಿದ್ದು, ವಿಠಲ ನಾಯಕ್ ಕಲ್ಲಡ್ಕ ದಿಕ್ಕೂಚಿ ಭಾಷಣ ಮಾಡಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪ್ರಾಂತೀಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಮೆಲ್ಕಾರ್, ಮಾಣಿ ಕ್ಲಬ್ ಅಧ್ಯಕ್ಷ ಜನಾರ್ದನ ಪೆರಾಜೆ, ಸಂಚಾಲಕರಾದ ಮದ್ವರಾಜ್ ಕಲ್ಮಾಡಿ ಉಪಸ್ಥಿತರಿದ್ದರು.