ಬಂಟ್ವಾಳ: ಬಂಟ್ವಾಳ ತಾಲೂಕಿನ ಪಿಲಿಮೊಗರು ಎಂಬಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೇಖರ ಶೆಟ್ಟಿ (53) ಸಾವನ್ನಪ್ಪಿದವರು.
ಈ ಕುರಿತು ಅವರ ಪತ್ನಿ ನೀಡಿದ ದೂರಿನಂತೆ ಪ್ರಕರಣ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಶೇಖರ ಶೆಟ್ಟಿ ಜೀವನದಲ್ಲಿ ಜಿಗುಪ್ಸೆಗೊಂಡು ಡಿ.12ರ ಬೆಳಿಗ್ಗೆ 9 ಗಂಟೆಯಿಂದ ಮದ್ಯಾಹ್ನ 1.30 ಗಂಟೆಯ ಮಧ್ಯದ ಅವಧಿಯಲ್ಲಿ ಅವರ ತಾಯಿಯ ಮನೆಯಾದ ಪಿಲಿಮೊಗರು ಗ್ರಾಮದ ಸುಣ್ಣಡಪೋಳಿ ಎಂಬಲ್ಲಿರುವ ಮನೆಯಲ್ಲಿ ಅಡುಗೆ ಮನೆಯ ಹಂಚಿಗೆ ಅಳವಡಿಸಿದ ಪಕ್ಕಾಸಿಗೆ ಶೇಖರ ಶೆಟ್ಟಿ ತನ್ನ ಲುಂಗಿಯಿಂದ ಒಂದು ತುದಿಯನ್ನು ಪಕ್ಕಾಸಿಗೆ ಕಟ್ಟಿ ಇನ್ನೊಂದು ತುದಿಯನ್ನು ಕುಣಿಕೆ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.