ಬಂಟ್ವಾಳ: ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನೆಹರೂನಗರ ಅಂಡರ್ ಪಾಸ್ ಬಳಿ ವ್ಯಕ್ತಿಯೊಬ್ಬ ಮಾದಕ ದ್ರವ್ಯ ಸಹಿತ ಬಂಟ್ವಾಳ ನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಆತನನ್ನು ಬಂಧಿಸಲಾಗಿದೆ.
ಬಂಟ್ವಾಳ ನಗರ ಪೊಲೀಸ್ ಠಾಣಾ ಉಪನಿರೀಕ್ಷಕ ಸಂದೀಪ್ ಕುಮಾರ್ ಶೆಟ್ಟಿ ಡಿ.12ರಂದು ಠಾಣಾ ಸಿಬಂದಿ ಜೊತೆ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಸಂಜೆ ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ನೆಹರೂನಗರ ಅಂಡರ್ ಪಾಸ್ ನ ಬಳಿ ತಲುಪಿದಾಗ ಅಂಡರ್ ಪಾಸ್ ಪಕ್ಕ ಮಣ್ಣು ರಸ್ತೆಯ ಬಳಿ ಒಬ್ಬಾತ ನಿಂತುಕೊಂಡಿದ್ದು ವಿಚಾರಿಸಲಾಗಿ ಕೇರಳದ ಕಾಸರಗೋಡಿನ ಅಬ್ದುಲ್ ನಾಸೀರ್ (28) ಎಂದು ಹೇಳಿದ್ದಾನೆ. ವಿಚಾರಣೆ ನಡೆಸಿದಾಗ ಉತ್ತರಿಸಲು ತಡವರಿಸಿದ್ದು, ಕೂಲಂಕಷವಾಗಿ ವಿಚಾರಣೆ ನಡೆಸಿದ ವೇಳೆ ಆರೋಪಿ ಜೊತೆ ಮೆಥ್(Methamphetamine) ಡ್ರಗ್ಸ್ ಇದ್ದು, ಮೆಥ್ (Methamphetamine) ಸೇವಿಸಲು ಜನವಿರಳ ಸ್ಥಳದಲ್ಲಿ ಬಂದಿರುವುದಾಗಿ ತಿಳಿಸಿದ್ದಾನೆ. ಆರೋಪಿ ಧರಿಸಿದ್ದ ಜೀನ್ಸ್ ಪ್ಯಾಂಟಿನ ಎಡ ಜೇಬಿನಿಂದ 3 ಪ್ಲಾಸ್ಟಿಕ್ ಕವರನ್ನು ತೆಗೆದು ಹಾಜರುಪಡಿಸಿದ್ದು ಅದರಲ್ಲಿ ಸಕ್ಕರೆಯಂತೆ ಕಾಣುವ ಪದಾರ್ಥ ಇದ್ದು ಸೊತ್ತಿನ ಬಗ್ಗೆ ವಿಚಾರಿಸಿದಾಗ ನಿದ್ರಾಜನಕ ಮೆಥ್ (Methamphetamine) ಎಂದು ತಿಳಿಸಿದ್ದಾನೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.