ಹಿಂದುಗಳು ತಾಯಿ ಸಮಾನವಾಗಿ ಪೂಜಿಸುವ ಗೋವನ್ನು ಮನೆಯಿಂದಲೇ ಎಳೆದೊಯ್ದು ಹತ್ಯೆ ಮಾಡಿದ ಪ್ರಕರಣ ನಡೆದಿದೆ. ಇದಲ್ಲದೆ, ಗೋಹತ್ಯೆ, ಸಾಗಾಟ ನಿರಂತರವಾಗಿ ನಡೆಯುತ್ತಿರುವ ಕುರಿತು ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಹಿಂದು ಜಾಗರಣಾ ವೇದಿಕೆ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಒತ್ತಾಯಿಸಿದ್ದಾರೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಆರೋಪಿಗಳ ಜತೆಗೆ ಯಾರೆಲ್ಲ ಇದ್ದಾರೆ ಅವರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. ಕೆದಿಲ, ಸತ್ತಿಕಲ್ಲು, ಸರೊಳಿ ಭಾಗದಿಂದ ಅವ್ಯಾಹತವಾಗಿ ಗೋಕಳವು ನಡೆಯುತ್ತಿರುವುದಾಗಿ ಅವರು ಆಪಾದಿಸಿದರು. ಸಹಸಂಯೋಜಕ ಅಕ್ಷಯ್ ರಜಪೂತ್ ಹಾಗೂ ಅನೂಪ್ ಮಯ್ಯ ಉಪಸ್ಥಿತರಿದ್ದರು.