ಬಿ.ಸಿ.ರೋಡಿನ ಶ್ರೀ ಸಾಯಿ ಕಿಡ್ ಝೋನ್ ವಿದ್ಯಾ ಸಂಸ್ಥೆಗಳು ಹಾಗೂ ರಕ್ಷಕ ಶಿಕ್ಷಕ ಸಂಘದ ಆಶ್ರಯದಲ್ಲಿ ಆಟಿದ ಕೂಟ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ನಡೆಯಿತು.
ಆಟಿ ದ ಕೂಟ ಕಾರ್ಯಕ್ರಮವನ್ನು ವೈದ್ಯರು ಹಾಗೂ ಯೆನೆಪೋಯ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಉಪನ್ಯಾಸಕರಾಗಿರುವ ಡಾ. ಬಾಲಕೃಷ್ಣ ಕುಮಾರ್ ದೀಪ ಬೆಳಗಿಸಿ ತೆಂಗಿನ ಗರಿ ಅರಳಿಸುವ ಮುಖೇನ ಉದ್ಘಾಟಿಸಿದರು. ಆಟಿ ತಿಂಗಳ ಮಹತ್ವ ಮತ್ತು ಸಂಸ್ಕೃತಿ , ಆಚಾರ ವಿಚಾರ ಗಳ ಬಗ್ಗೆ ತಿಳಿಸುತ್ತಾ ಶ್ರೀ ಸಾಯಿ ಕಿಡ್ ಝೋನ್ ಸಂಸ್ಥೆ ಹಲವಾರು ಹೊಸ ಕಾರ್ಯಕ್ರಮಗಳ ಮೂಲಕ ಮಾದರಿ ಸಂಸ್ಥೆ ಯಾಗಿ ಬೆಳೆದು ನಿಂತಿದೆ ಎಂದು ತಿಳಿಸಿದರು.
ವೇದಿಕೆ ಯಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರಾದ ತೇಜಸ್ವಿನಿ ಪೂಜಾರಿ ಹಾಗೂ ಉಪಾಧ್ಯಕ್ಷ ರಾದ ಸುಂದರ್ ಎನ್. ಕೋಶಾಧ್ಯಕ್ಷ ರಾದ ಜಯಶ್ರೀ,ಆಡಳಿತ ಮಂಡಳಿಯ ಸದಸ್ಯರಾದ ಆರತಿ ಅಮೀನ್, ರಾಜೇಶ್ ಅಮಿನ್ ಉಪಸ್ಥಿತರಿದ್ದರು.
OPTIC WORLD
ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಐತಪ್ಪ ಪೂಜಾರಿ ವಹಿಸಿದ್ದರು.ಆಟಿ ದ ಕೂಟ ಕಾರ್ಯಕ್ರಮ ದಲ್ಲಿ ಒಟ್ಟು 49 ಬಗೆ ಬಗೆಯ ತಿಂಡಿ ತಿನಿಸುಗಳನ್ನು ತಯಾರು ಮಾಡಿ ತಂದು ಆಟಿ ದ ಕೂಟ ವನ್ನು ಯಶಸ್ವಿ ಮಾಡಿದ ಪೋಷಕರಿಗೆ , ರಕ್ಷಕ ಶಿಕ್ಷಕ ಸಂಘದ ಎಲ್ಲಾ ಪದಾಧಿಕಾರಿ ಗಳಿಗೆ ,ಕೆಸರ್ಡ್ ಒಂಜಿ ದಿನದ ಕ್ರೀಡಾಕೂಟ ದಲ್ಲಿ ವಿಜೇತರಾದ ಎಲ್ಲಾ ಕ್ರೀಡಾಪಟುಗಳಿಗೆ,,ಶಿಕ್ಷಕಿಯರಿಗೆ, ಶಿಕ್ಷಕ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ ಸಿಬ್ಬಂದಿ ವರ್ಗಕ್ಕೆ , ಕೃತಜ್ಞತೆ ಗಳನ್ನೂ ಸಲ್ಲಿಸಿ ದರು. ಶಿಕ್ಷಕಿ ಗೀತಾ ಸ್ವಾಗತಿಸಿದರು, ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿ ,ಧನ್ಯವಾದ ಸಲ್ಲಿಸಿದರು. ಶಿಕ್ಷಕಿಯರಾದ ಚೈತ್ರ ,ಮತ್ತು ಪುಷ್ಪಲತಾ ಕೆಸರ್ಡ್ ಒಂಜಿ ದಿನದ ಕ್ರೀಡಾಕೂಟ ದ ವಿಜೇತರ ಪಟ್ಟಿ ವಾಚಿಸಿದರು.