ಬಂಟ್ವಾಳ: ಬಿ.ಸಿ.ರೋಡಿನ ವಿಜಯಲಕ್ಷ್ಮೀ ಸಮೂಹ ಸಂಸ್ಥೆಗಳ ಮಾಲೀಕ ಮರಕಡ ಶ್ರೀನಾಥ್ ಪ್ರಭು (70) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೂ. 30ರಂದು ಸಂಜೆ ನಿಧನ ಹೊಂದಿದರು. ಪತ್ನಿ, ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಉದ್ಯಮಿಯಾಗಿದ್ದ ಅವರು ಕೊಡುಗೈ ದಾನಿಯಾಗಿ ಗುರುತಿಸಿಕೊಂಡಿದ್ದರು. ಬಿ.ಸಿ.ರೋಡಿನ ಹಳೆ ಎಲ್ ಐಸಿ ಕಚೇರಿಯ ಹಿಂಭಾಗದಲ್ಲಿರುವ ಅವರ ಸ್ವಗೃಹದಲ್ಲಿ ಜುಲೈ 1ರಂದು ಬೆಳಗ್ಗೆ 10 ಗಂಟೆಗೆ ಅಂತಿಮ ವಿಧಿ ವಿಧಾನಗಳು ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.
View Comments
Very sorry to hear the loss ofMr.Srinath Prabhu.
Our Deepest condolences to the family and pray the almighty to give them the strength to bear his loss.May his soul rest in peace