Accident
ಅರಂತೋಡು ಎನ್ ಎಂ ಪಿ ಯು ಕಾಲೇಜು ಬಳಿ ಕೆ.ಎಸ್ ಆರ್ ಟಿ ಸಿ ಬಸ್ಸುಗಳ ಮಧ್ಯೆ ನಡೆದ ಅಪಘಾತದಲ್ಲಿ ಮಹಿಳೆ ಮೃತಪಟ್ಟಿದ್ದಾರೆ.
Accident
ಸುಳ್ಯ ಆರಂತೋಡು ಗ್ರಾಮದ ಕೋಡಂಕೇರಿ ಎಂಬಲ್ಲಿ, ಸುಳ್ಯದಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಗೆ, ಮಡಿಕೇರಿ ಕಡೆಯಿಂದ – ಸುಳ್ಯ ಮಾರ್ಗವಾಗಿ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಅಪಘಾತವಾಗಿರುತ್ತದೆ. ಅಪಘಾತದಲ್ಲಿ ಮಡಿಕೇರಿ ಕುಶಾಲನಗರ ಮೂಲದ ಭಾರತಿ (50) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದು, 2 ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿರುತ್ತದೆ. ಪ್ರಯಾಣಿಕರ ಪೈಕಿ 17 ಜನರಿಗೆ ಸಾಮಾನ್ಯ ಗಾಯಗಳಾಗಿದ್ದು, ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಗಾಗಿ ಬೇರೆ ಬೇರೆ ಆಸ್ಪತ್ರೆಗಳಿಗೆ ದಾಖಲಿಸಲಾಗಿರುತ್ತದೆ.