ಸ್ವಪಕ್ಷ ಶಾಸಕರೇ ಸಿದ್ದರಾಮಯ್ಯ ಸರಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಮುಖಂಡ ಹರಿಕೃಷ್ಣ ಬಂಟ್ವಾಳ ಹೇಳಿದ್ದಾರೆ. ಸಂಗಬೆಟ್ಟು ಗ್ರಾಮ ಪಂಚಾಯತ್ ಕಛೇರಿ ಎದುರು ಬಿಜೆಪಿ ವತಿಯಿಂದ ರಾಜ್ಯ ಸರಕಾರದ ನೀತಿ ವಿರೋಧಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಸಂಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜೀವಿ ಪೂಜಾರಿ, ಉಪಾಧ್ಯಕ್ಷ ಸುರೇಶ್ ಕುಲಾಲ್, ಸದಸ್ಯರಾದ ಸಂದೇಶ್ ಶೆಟ್ಟಿ ಪೋಡುಂಬ,ಸುನೀಲ್ ಶೆಟ್ಟಿಗಾರ್ , ಉದಯ ಪೂಜಾರಿ , ಶಕುಂತಲಾ , ಪ್ರೇಮ , ವಿದ್ಯಾ ಪ್ರಭು , ಶಾಂತ , ಸಿದ್ದಕಟ್ಟೆ ಸಿ .ಎ ಬ್ಯಾಂಕ್ ನಿರ್ದೇಶಕರಾದ ವಿಶ್ವನಾಥ ಶೆಟ್ಟಿಗಾರ್ , ಶಕ್ತಿ ಕೇಂದ್ರದ ಪ್ರಮುಖ್ ನವೀನ್ ಹೆಗ್ಡೆ , ಪ್ರಮುಖರಾದ ದೀಪಕ್ ಶೆಟ್ಟಿಗಾರ್ , ಉಮೇಶ್ ಗೌಡ , ಸುಂದರ ಪೂಜಾರಿ , ಭಾಸ್ಕರ ಪ್ರಭು , ಸದಾನಂದ ಪೂಜಾರಿ ಕರ್ಪೆ , ಮಾಧವ ಶೆಟ್ಟಿಗಾರ್ , ವಿನೋದ್ ಅಡಪ, ಭೋಜ ಶೆಟ್ಟಿಗಾರ್,, ಗಣೇಶ ಮೇಲುಗುಡ್ಡೆ , ದಾಮೋದರ ಪೂಜಾರಿ , ರಾಜೇಶ್ ಶೆಟ್ಟಿ ಮತ್ತಿತ್ತರು ಉಪಸ್ಥಿತರಿದ್ದರು .ಪ್ರಭಾಕರ ಪ್ರಭು ಸ್ವಾಗತಿಸಿ ,ಕಾರ್ಯಕ್ರಮ ನಿರೂಪಿಸಿದರು . ಸಂದೇಶ್ ಶೆಟ್ಟಿ ಧನ್ಯವಾದವಿತ್ತರು.