BANTWAL
BANTWAL
ರಾಜ್ಯ ಸರಕಾರದ ವಿರುದ್ಧ ಬಿಜೆಪಿ ನಡೆಸುತ್ತಿರುವ ಬಂಟ್ವಾಳ ಪುರಸಭೆ ಮುಂಭಾಗ ಸೋಮವಾರ ನಡೆದಿದ್ದು, ಪಕ್ಷದ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ನೇತೃತ್ವ ವಹಿಸಿದರು.ಈ ಸಂದರ್ಭ ಮಾತನಾಡಿದ ಅವರು ರಾಜ್ಯ ಸರಕಾರದ ನೀತಿಗಳಿಂದಾಗಿ ಯಾವುದೇ ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿಲ್ಲ. ತುಷ್ಟೀಕರಣದ ರಾಜಕಾರಣವನ್ನು ಮಾಡುತ್ತಿರುವ ಆಳುವ ಸರಕಾರ ಜನರ ವಿಶ್ವಾಸವನ್ನು ಕಳೆದುಕೊಂಡಿದೆ ಎಂದರು.
ಬಿಜೆಪಿ ಮುಖಂಡ ರಾಮದಾಸ ಬಂಟ್ವಾಳ ಮಾತನಾಡಿ, ಇಂದು ತುರ್ತುಪರಿಸ್ಥಿತಿಯನ್ನು ನೆನಪು ಮಾಡುವ ಕೆಲಸವನ್ನು ರಾಜ್ಯ ಸರಕಾರ ಮಾಡುತ್ತಿದ್ದು,ಆಡಳಿತ ಪಕ್ಷದ ಶಾಸಕರೇ ಆಶ್ರಯ ಹಗರಣದ ಕುರಿತು ಮಾತನಾಡುತ್ತಿದ್ದಾರೆ. ನಿರ್ಮಾಣ ಕಾಮಗಾರಿ ಪೂರ್ತಿ ನಿಂತಿದ್ದು, ಸಮಸ್ಯೆಗಳಿಗೆ ಸರಕಾರವೇ ಹೊಣೆಗಾರನಾಗಿದೆ ಎಂದರು.
BANTWAL
ಹಿರಿಯ ಮುಖಂಡರೂ ಪುರಸಭಾ ಸದಸ್ಯ ಎ.ಗೋವಿಂದ ಪ್ರಭು ನೇತೃತ್ವದಲ್ಲಿ ಪುರಸಭೆ ಮುಖ್ಯಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಪ್ರಮುಖರಾದ ದಿನೇಶ್ ಭಂಡಾರಿ, ಬೊಂಡಾಲ ಜನಾರ್ದನ ಕುಲಾಲ್, ಮಚ್ಚೇಂದ್ರ ಸಾಲಿಯಾನ್, ಸುರೇಶ್ ಕುಲಾಲ್, ಸುರೇಶ್ ಟೈಲರ್, ಗಂಗಾಧರ ಪೂಜಾರಿ, ಪ್ರಣಾಮ್ ಅಜ್ಜಿಬೆಟ್ಟು, ಲಕ್ಷಣರಾಜ್, ಭಾಸ್ಕರ ಟೈಲರ್, ಗೋಪಾಲ ಸುವರ್ಣ, ಗಣೇಶ್ ಕಾಮಾಜೆ, ಸತೀಶ್ ಶೆಟ್ಟಿ ಮೊಡಂಕಾಪು, ಗಣೇಶ್ ದಾಸ್, ಪುರಸಭೆ ಸದಸ್ಯರಾದ ವಿದ್ಯಾವತಿ ಪ್ರಮೋದ್ ಕುಮಾರ್, ರೇಖಾ ರಮನಾಥ ಪೈ, ಮೀನಾಕ್ಷಿ ಜೆ. ಗೌಡ, ಶಶಿಕಲಾ ಪ್ರಭಾಕರ್, ಚೈತನ್ಯದಾಸ್, ದೇವಕಿ ಉಪಸ್ಥಿತರಿದ್ದರು. ಪುರಸಭಾ ಸದಸ್ಯ ಹರಿಪ್ರಸಾದ್ ಭಂಡಾರಿಬೆಟ್ಟು ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.