MLA RAJESH NAIK At Rayee Grama Panchayath
MLA RAJESH NAIK At Rayee Grama Panchayath
ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಪ್ರತಿಭಟನೆಯನ್ನು ಸೋಮವಾರ ನಡೆಸಿದ್ದು, ರಾಯಿ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ನೇತೃತ್ವ ವಹಿಸಿದ್ದರು.
ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ, ಬಂಟ್ವಾಳ ಬಿಜೆಪಿ ಬಂಟ್ವಾಳ ಮಂಡಲ ಆಶ್ರಯದಲ್ಲಿ ರಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಬೂಡ ಮಾಜಿ ಅಧ್ಯಕ್ಷರಾದ ದೇವದಾಸ ಶೆಟ್ಟಿ, ರಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ರಾಯಿಬೆಟ್ಟು, ಉಪಾಧ್ಯಕ್ಷರಾದ ಗುಣವತಿ ಪೂಜಾರಿ, ಪ್ರಮುಖರಾದ ರಮನಾಥ ರಾಯಿ, ಹರೀಶ್ ರಾಯಿ, ಚಂದ್ರಶೇಖರ ಗೌಡ ಕಾರಂಬಡೆ, ಸಂತೋಷ್ ಅಂಚನ್, ಆನಂದ ಬುರಾಲ್, ಜಯಂತ್ ಸಪಲ್ಯ, ರವೀಂದ್ರ ಪೂಜಾರಿ ಬದನಡಿ, ದುರ್ಗಾದಾಸ್ ಶೆಟ್ಟಿ ಮಾವಂತೂರು ಭಾಗವಹಿಸಿದರು. ರಶ್ಮಿತ್ ಶೆಟ್ಟಿ ಕೈತ್ರೋಡಿ ಸ್ವಾಗತಿಸಿ ವಂದಿಸಿದರು.
BJP protested against the state Congress government in every gram panchayat on Monday, led by Bantwala MLA Rajesh Naik Ulippadi in front of the Rai gram panchayat office.