ವಿಟ್ಲ

ಮಳೆಗಾಲಕ್ಕೆ ಸಿದ್ಧತೆಯೇ ಮಾಡಿಲ್ಲ. ಹೂಳೆತ್ತದ ಕಾರಣ ಚರಂಡಿಗಳ ಮೋರಿಗಳ ನೀರು ರಸ್ತೆಯ ಮೇಲೆ!

ಗಣೇಶ ಪ್ರಸಾದ ಪಾಂಡೇಲು

ವಿಟ್ಲ-ಕಬಕ ನಡುವಿನ ಲೋಕೋಪಯೋಗಿ ಇಲಾಖೆ ರಸ್ತೆಯನ್ನುರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಹಂತ ೩ ಪ್ಯಾಕೇಜ್ ೨೫೧ರಲ್ಲಿ ಮರು ಗುತ್ತಿಗೆ ನಡೆಸಿ ಸುಮಾರು ೧೩ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿತ್ತು., ಆದರೆ ರಸ್ತೆಯ ಹಲವು ಕಡೆಯಲ್ಲಿ ಹೊಂಡಗಳು ಉಳಿದುಕೊಂಡಿವೆ.

ಜಾಹೀರಾತು

ಚರಂಡಿ ಹಾಗೂ ಮೋರಿಗಳಿದ್ದರೂ, ಮಳೆ ನೀರು ಮಾತ್ರ ರಸ್ತೆಯಲ್ಲೇ ಹರಿಯುತ್ತಿದೆ. ಕೆಲವು ಭಾಗದಲ್ಲಿ ಕೆಸರು ಮಣ್ಣು ರಸ್ತೆಯನ್ನು ಆವರಿಸಿದೆ‌ ವಾಹನ ಸವಾರರು ಕೆಸರು ನೀರಿನಲ್ಲಿ ಪರದಾಟ ಸ್ಥಿತಿಯಿದೆ. ಎಸ್. ಎಚ್. ಡಿ. ಪಿ. ಮೂಲಕ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದಿದ್ದು, ಎರಡನೇ ಬಾರಿ ಟೆಂಡರ್ ನಡೆಸಿ ಕಾಮಗಾರಿಯನ್ನು ನಡೆಸಲಾಗಿತ್ತು. ಕಬಕ ಸಮೀಪದ ಎರಡು ಕಡೆಗಳಲ್ಲಿ, ಇಡ್ಕಿದು ಗ್ರಾಮ ಪಂಚಾಯಿತಿಯ ಮುಂಭಾಗ, ಕಂಬಳಬೆಟ್ಟು ಮೋರಿಯ ಸಮೀಪ ಎರಡು ಕಡೆ, ಕಂಬಳ ಬೆಟ್ಟು ದರ್ಗಾ  ಶರೀಪ್ ಸಮೀಪ, ಬದನಾಜೆ, ನಿಡ್ಯ ಚಂದಳಿಕೆ ತಿರುವು ಹೀಗೆ ರಸ್ತೆಯುದ್ದಕ್ಕೂ ಮಳೆಯ ನೀರು ರಸ್ತೆಯಲ್ಲೇ ಹರಿಯುತ್ತಿದೆ

ಮೋರಿಯಲ್ಲಿ ನೀರಿಗೆ ಅವಕಾಶ ಇಲ್ಲ!

ಕಂಬಳಬೆಟ್ಟು ಧರ್ಮನಗರ ಶ್ರೀ ಜಯದುರ್ಗಾ ಪರಮೇಶ್ವರಿ ಭಜನಾ ಮಂದಿರ ಸಮೀಪದಲ್ಲಿ ಹೊಸದಾಗಿ ಮೋರಿ ನಿರ್ಮಾಣ ಮಾಡಿದ್ದು, ಅದರಲ್ಲಿ ಹೋಗಬೇಕಾದ ನೀರು ರಸ್ತೆಯಲ್ಲಿ ಹರಿಯುತ್ತಿದೆ. ವಾಹನದ ಓಡಾಟದ ವೇಗಕ್ಕೆ ಅಕ್ಕಪಕ್ಕದ ಪಾದಚಾರಿಗಳ ಮೇಲೆ ನೀರು ಹಾಯುತ್ತದೆ. ಅದಕ್ಕಿಂತ ನೂರು ಮೀಟರ್ ದೂರದಲ್ಲಿ ಹೊಸದಾಗಿ ಅಳವಡಿಸಿದ ಮೋರಿಯಲ್ಲಿ ಕೂಡ ಸಾಗಬೇಕಾದ ನೀರು ರಸ್ತೆಯಲ್ಲಿ ಹೋಗುತ್ತಿದೆ. ಮಳೆಗಾಲ ಮುಗಿಯುವ ಸಂದರ್ಭಕ್ಕೆ ರಸ್ತೆಗಳ ಡಾಮರು ಹುಡುಕುವ ಸ್ಥಿತಿ ನಿರ್ಮಾಣವಾಗಲಿದೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.