ಬಂಟ್ವಾಳ

ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನ ಬ್ರಹ್ಮಕಲಶೋತ್ಸವ: ಪೂರ್ವಭಾವಿ ಸಭೆ

 

ಜಾಹೀರಾತು

https://www.opticworld.net/

 

ಬಿ.ಸಿ.ರೋಡಿನ ಹೃದಯಭಾಗದಲ್ಲಿರುವ ಶ್ರೀ ರಕೇಶ್ವರೀ ದೇವಿ ದೇವಸ್ಥಾನದ ನವೀಕರಣ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಏಪ್ರಿಲ್ 4 ರಿಂದ 9 ರ ವರೆಗೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ದೇವಸ್ಥಾನದ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆಯಿತು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ. ರಮೇಶಾನಂದ ಸೋಮಯಾಜಿ ಅಧ್ಯಕ್ಷತೆ ವಹಿಸಿ ಮಾತನಾಡಿ,ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರೀ ಮುಂಬಾಗ,ಶ್ರೀ ಚಂಡಿಕೇಶ್ವರೀ ಹಿಂಬಾಗದಲ್ಲಿದ್ದರೆ ಮಧ್ಯಭಾಗದಲ್ಲಿರುವ ಶ್ರೀ ರಕ್ತೇಶ್ವರೀ ದೇವಿ ಈ ಭಾಗದ ಸಮಸ್ತ ಜನರ ಶ್ರೇಯೋಭಿವೃದ್ಧಿ ಮಾಡಿದ್ದು, ಈ ಹಿನ್ನೆಲೆಯಲ್ಲಿ ಸರ್ವ ಭಕ್ತರ ಸಹಕಾರ ಅಗತ್ಯವೆಂದರು.

ವಿವಿಧ ಸಮಿತಿ ಪದಾಧಿಕಾರಿಗಳಾದ ಚಂದ್ರಹಾಸ ಶೆಟ್ಟಿ ರಂಗೋಲಿ, ಅಶ್ವನಿ ಕುಮಾರ್ ರೈ, ದೇವದಾಸ ಶೆಟ್ಟಿ‌ ಮಾತನಾಡಿ, ಶ್ರೀಅನ್ನಪೂರ್ಣೇಶ್ವರೀ ಮತ್ತು ಶ್ರೀ ಚಂಡಿಕೇಶ್ವರೀ ದೇವಸ್ಥಾನದ ಬ್ರಹ್ಮಕಲಶವು ಸರ್ವ ಜನತೆ, ಸಂಘ ಸಂಸ್ಥೆಗಳ ಶ್ರಮ,ಸೇವೆಯಿಂದ ಅತ್ಯಂತ ಯಶಸ್ವಿಯಾಗಿದ್ದನ್ನು ಸ್ಮರಿಸಿದರಲ್ಲದೆ ರಕ್ತೇಶ್ವರೀ ದೇವಸ್ಥಾನದ ಬ್ರಹ್ಮಕಲಶದಲ್ಲೂ ಜಾತಿ, ಮತ, ಬೇಧ ಮರೆತು ಏಕ ಮನಸ್ಸಿನಿಂದ  ಸಹಕಾರ ನೀಡಿದರೆ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎರಡೂ ದೇವಳದ ಬ್ರಹ್ಮಕಲಶದ ಸಂದರ್ಭ ಮಹಿಳೆಯರ ಸೇವಾಕಾರ್ಯ ಅದ್ಬುತವಾಗಿದ್ದು,ಇಲ್ಲು ಮಹಿಳೆಯರು ಅದೇ ಮಾದರಿಯಲ್ಲಿ‌ ಸಹಕರಿಸುವಂತೆ ಕೋರಲಾಯಿತು. ಬ್ರಹ್ಮಕಲಶದ ಆರಂಭಿಕ ಹಂತದ ಹೊರೆಕಾಣಿಕೆ ಮೆರವಣಿಗೆ ಯಶಸ್ವಿಯಾದರೆ ಇಡೀ ಬ್ರಹ್ಮಕಲಶೋತ್ಸವವೇ ಯಶಸ್ವಿಯಾದಂತೆ ಈ ನಿಟ್ಟಿನಲ್ಲಿ ಸಹಕರಿಸುವಂತೆ ಮನವಿ ಮಾಡಲಾಯಿತು.

ಸುಮಾರು1.60 ಕೋ.ರೂ.ವೆಚ್ಚದಲ್ಲಿ ದೇವಸ್ಥಾನದ  ಗರ್ಭಗುಡಿ,ಬಾಗಿಲು,ನಾಗಬನ ಸಹಿತ ವಿವಿಧ ಕಾಮಗಾರಿಯನ್ನು ನಡೆಸಲುದ್ದೇಶಿಸಲಾಗಿದೆ. ಗರ್ಭಗುಡಿಯ ಬಾಗಿಲಿಗೆ ಬೆಳ್ಳಿಕವಚ ಹಾಕಲು ನಿರ್ಧರಿಸಲಾಗಿದೆ ಈಗಾಗಲೇ ಕಾಮಗಾರಿ ಆರಂಭವಾಗಿದ್ದು, 960 ಮಂದಿ ಭಕ್ತರು ಸಮಿತಿಗೆ ಸೇರ್ಪಡೆಯಾಗಿದ್ದರೆ, 50 ಸಂಘ ಸಂಸ್ಥೆಗಳು ಹೆಸರನ್ನು ನೋಂದಾಯಿಸಿಕೊಂಡಿದೆ ಎಂದುಪ್ರಧಾನ ಕಾರ್ಯದರ್ಶಿ ಐತಪ್ಪ ಪೂಜಾರಿ  ಅವರು ಪ್ರಸ್ತಾವನೆಯ ಮೂಲಕ ಸಭೆಗೆ  ತಿಳಿಸಿದರು. ಆಡಳಿತ ಸಮಿತಿ ಅಧ್ಯಕ್ಷ ಬಿ. ವಿಶ್ವನಾಥ್, ಧಾರ್ಮಿಕ ದತ್ತಿ ಜಿಲ್ಲಾ ಸಮಿತಿ ಸದಸ್ಯ ದೇವಪ್ಪಕುಲಾಲ್ ಪಂಜಿಕಲ್ಲು, ವಿವಿಧ ಸಮಿತಿ ಪದಾಧಿಕಾರಿಗಳಾದ ಲೋಕನಾಥ ಶೆಟ್ಟಿ, ಉಮೇಶ್ ಕುಮಾರ್ ವೈ, ನಾರಾಯಣ ಹೆಗ್ಡೆ, ವಸಂತ ರಾವ್ ಬಿ.ಸಿ.ರೋಡು, ಬೇಬಿ ಕುಂದರ್ ,ಸತೀಶ್ ಭಂಡಾರಿ, ದಿವಾಕರ ಪಂಬದಬೆಟ್ಟು, ರವೀಂದ್ರ ಕಂಬಳಿ, ನೇಮಿರಾಜ ಶೆಟ್ಟಿ ಕೊಡಂಗೆ, ಬಿ.ಮೋಹನ್, ಭುವನೇಶ್ ಪಚ್ಚಿನಡ್ಕ, ರಾಜೇಶ್ ಎಲ್.ನಾಯಕ್  ಮೊದಲಾದವರಿದ್ದರು.ನ್ಯಾಯವಾದಿ ಆಶಾ ರೈ ಮತ್ತಿತರರು ಸಲಹೆಗಳನ್ನಿತ್ತರು. ದೇವಳದ ಅರ್ಚಕರು ಪ್ರಾರ್ಥಿಸಿದರು. ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷ ಸಂಜೀವ ಪೂಜಾರಿ ಗುರುಕೃಪಾ ಸ್ವಾಗತಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.ಸತೀಶ್ ಶೆಟ್ಟಿ ಪಲ್ಲಮಜಲು ವಂದಿಸಿದರು.

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

1 hour ago