ಮಂಗಳೂರು: ವಿಶೇಷ ಅಗತ್ಯವುಳ್ಳ ಮಕ್ಕಳಿಗಾಗಿ ಕೆಲಸ ಮಾಡುತ್ತಿರುವ ಮಂಗಳೂರಿನ ಶಕ್ತಿನಗರದ ಅರಿವು ಅರ್ಲಿ ಇಂಟರ್ವೆನ್ಶನ್ ಸೆಂಟರ್, ಬೆಂಗಳೂರಿನ ಅಸೋಸಿಯೇಶನ್ ಫಾರ್ ಪೀಪಲ್ ವಿದ್ ಡಿಸೇಬಲಿಟೀಸ್ ವತಿಯಿಂದ ಮಂಗಳೂರಿನ ನಂತೂರಿನಲ್ಲಿರುವ ಶ್ರೀ ಭಾರತೀ ಸಮೂಹ ಸಂಸ್ಥೆಗಳ ಸೇವಾ ಸಮಿತಿ ಸಹಯೋಗದೊಂದಿಗೆ ಕಾಲೇಜಿನ ಶಂಕರಶ್ರೀ ಸಭಾಂಗಣದಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ತಪಾಸಣೆ ಹಾಗೂ ಪೋಷಕರ ತರಬೇತಿ ಶಿಬಿರ ಆಯೋಜಿಸಿತ್ತು.
ಅತಿಥಿಗಳಾಗಿ ಆಗಮಿಸಿದ ಮಂಗಳೂರಿನ ಶಿಶು ಅಭಿವೃದ್ಧಿ ಯೋಜನ ಅಭಿವೃದ್ದಿ ಅಧಿಕಾರಿ ಶ್ವೇತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂಥ ಕೇಂದ್ರಗಳ ಅಗತ್ಯವಿದ್ದು, ಅಂಗನವಾಡಿಯ ಮಕ್ಕಳಿಗೆ ಬಹಳ ಪ್ರಯೋಜನ ಆಗಿದೆ ಎಂದರು.
ಎ ಪಿ ಡಿ ಮಕ್ಕಳ ತಜ್ಞ ವೈದ್ಯರಾದ ಧನಂಜಯ ಮಾತನಾಡಿ, ಎ ಪಿ ಡಿ ಸ್ಥಳೀಯ ಸಂಸ್ಥೆಗಳಿಗೆ ತರಬೇತಿ ಕೊಟ್ಟು ಮಕ್ಕಳ ಬೆಳವಣಿಗೆಯ ಹಂತದಲ್ಲೇ ದೈಹಿಕ ಹಾಗೂ ಮಾನಸಿಕ ನ್ಯೂನತೆಗಳ ಕುರಿತು ತರಬೇತಿ ಹಾಗೂ ಬೆಳವಣಿಗೆಯ ಹಂತದಲ್ಲಿ ಯಾವ ರೀತಿಯ ಪೋಷಕರು ಮಹತ್ವದ ಪಾತ್ರ ವಹಿಸಬಹುದು ಎಂದರು.
ವೆನ್ಲೋಕ್ ಆಸ್ಪತ್ರೆಯ ಚರ್ಮರೋಗ ತಜ್ಞ ಡಾ. ನವೀನ್ ಮಾತನಾಡಿ, ವೆನ್ಲೋಕ್ ಆಸ್ಪತ್ರೆಯಿಂದ ದೊರಕುವ ಸೌಲಭ್ಯಗಳನ್ನು ವಿಶೇಷ ಮಕ್ಕಳ ಹೆತ್ತವರು ಪಡೆಯಬೇಕು, ಯುಡಿಐಡಿ ಕಾರ್ಡ್ ಪಡೆದರೆ, ಬಹಳಷ್ಟು ಪ್ರಯೋಜನವಾಗುತ್ತದೆ ಎಂದರು. ಶ್ರೀಭಾರತೀ ಪದವಿಪೂರ್ವ ಕಾಲೇಜು ಪ್ರಿನ್ಸಿಪಾಲ್ ಗಂಗಾರತ್ನ ಮಾತನಾಡಿ, ಭಾರತಿ ಸಮೂಹ ಸಂಸ್ಥೆ ವಿಶೇಷ ಮಕ್ಕಳಿಗೆ ಎಲ್ಲಾ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಲಯನ್ಸ್ ಕ್ಲಬ್ ವೆಲೆನ್ಸಿಯಾ ಅಧ್ಯಕ್ಷರಾದ ಲೆಸ್ಲಿ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ವೈದ್ಯ ಹಾಗೂ ಅರಿವು ಟ್ರಸ್ಟ್ ಅಧ್ಯಕ್ಷ ಡಾ. ಕೆ.ಸುಂದರ ಭಟ್ ಮಾತನಾಡಿ, ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಿ, ಮುಖ್ಯವಾಹಿನಿಗೆ ಸೇರ್ಪಡೆಯಾಗುವಂತೆ ಮಾಡುವುದೇ ಅರಿವು ಉದ್ದೇಶ ಎಂದರು. ಅರಿವು ಸಂಸ್ಥೆಯ ಸ್ಥಾಪಕ ನಿರ್ದೇಶಕಿ ಪೂರ್ಣಿಮಾ ಆರ್. ಭಟ್ ಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸಿದರು. ಈ ಸಂದರ್ಭ ಸಂಸ್ಥೆಯ ಟ್ರಸ್ಟಿ ಡಾ. ರಾಧಾಕೃಷ್ಣ ಭಟ್ ಉಪಸ್ಥಿತರಿದ್ದರು. ಸ್ವಾಗತವನ್ನು ಸಂಚಾಲಕಿ ತಿಲೋತ್ತಮೆ ಮಾಡಿದರು.
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…