ಬಂಟ್ವಾಳ: ಆಕಾಶವಾಣಿ ಕಲಾವಿದ ಮೌನೇಶ್ ಕುಮಾರ್ ಛಾವಣಿ ಅವರಿಂದ ಉದಯಗಾನ ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ನಡೆಯಲಿದೆ. ಜನವರಿ 26ರಂದು ಬೆಳಗ್ಗೆ 6ರಿಂದ 8ರವರೆಗೆ ಈ ಕಾರ್ಯಕ್ರಮ ನಡೆಯಲಿದ್ದು, ಅವರಿಗೆ ತಬಲಾದಲ್ಲಿ ಗೌತಮ್ ಜಪ್ಪಿನಮೊಗರು ಹಾಗೂ ಕೊಳಲುವಾದನದಲ್ಲಿ ಲೋಕೇಶ್ ಸಂಪಿಗೆ ಸಾಥ್ ನೀಡುವರು. ಕಲಾಸಕ್ತರು ಮುಂಜಾನೆ ನಡೆಯುವ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಂಘಟಕರಾದ ಡಾ. ವಿಜಯನಾರಾಯಣ ತೋಳ್ಪಾಡಿ ಮತ್ತು ಡಾ.ವೀಣಾ ತೋಳ್ಪಾಡಿ ತಿಳಿಸಿದ್ದಾರೆ.
ಮನುಷ್ಯ ಮನುಷ್ಯನ ನಡುವಿನ ವಿಶ್ವಾಸವೃದ್ಧಿಗೆ ಇಫ್ತಾರ್ ಕೂಟ: ರಮಾನಾಥ ರೈ (more…)