ಬಂಟ್ವಾಳ ತಾಲೂಕಿನ 11 ಗ್ರಾಪಂ ಮತ್ತು 1 ಪುರಸಭಾ ಸ್ಥಾನಕ್ಕೆ ನ.23ರಂದು ನಡೆದ ಉಪಚುನಾವಣಾ ಫಲಿತಾಂಶ ಮಂಗಳವಾರ ಹೊರಬಿದ್ದಿದ್ದು, ಮತ ಎಣಿಕಾ ಕೇಂದ್ರದ ಹೊರಗೆ ವಿಜೇತ ಅಭ್ಯರ್ಥಿಗಳನ್ನು ಕಾಂಗ್ರೆಸ್ ಮುಖಂಡರು ಅಭಿನಂದಿಸಿದರು. ಪುರಸಭೆಯ 1 ಮತ್ತು ಗ್ರಾಪಂನ 11ರಲ್ಲಿ 9 ಸ್ಥಾನಗಳು ಕಾಂಗ್ರೆಸ್ ಬೆಂಬಲಿತರು ಗೆದ್ದ ಹಿನ್ನೆಲೆಯಲ್ಲಿ ಹರ್ಷ ವ್ಯಕ್ತಪಡಿಸಿದ ಮಾಜಿ ಸಚಿವ ರಮಾನಾಥ ರೈ ವಿಜೇತರಿಗೆ ಶುಭಾಶಯ ಹೇಳಿದರು.ಪಕ್ಷ ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ, ಪಿಯೂಸ್ ಎಲ್. ರೋಡ್ರಿಗಸ್, ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ, ಪಕ್ಷದ ಕ್ಷೇತ್ರಾಧ್ಯಕ್ಷ ಬಾಲಕೃಷ್ಣ ಅಂಚನ್, ಬುಡಾ ಅಧ್ಯಕ್ಷ ಬೇಬಿ ಕುಂದರ್, ಅಬ್ಬಾಸ್ ಆಲಿ, ಮಲ್ಲಿಕಾ ಶೆಟ್ಟಿ, ಶೋಭಾ ಶೆಟ್ಟಿ, ಸುದರ್ಶನ ಜೈನ್, ಸಂಜೀವ ಪೂಜಾರಿ ಸಹಿತ ಪಕ್ಷ ಪ್ರಮುಖರು, ಪುರಸಭಾ ಸದಸ್ಯರು, ಗ್ರಾಪಂ ಅಧ್ಯಕ್ಷರ ಸಹಿತ ಪ್ರಮುಖರು ಆಗಮಿಸಿ ಶುಭ ಹಾರೈಸಿದರು.