ಬಂಟ್ವಾಳ ಪುರಸಭೆಯ ಒಂದು ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುರುಷೋತ್ತಮ ಬಂಗೇರ ವಿಜಯಿಯಾಗಿದ್ದಾರೆ.ನವೆಂಬರ್ 23ರಂದು ಚುನಾವಣೆ ನಡೆದಿದ್ದು, 26ರಂದು ಬಂಟ್ವಾಳ ತಾಲೂಕು ಆಡಳಿತ ಸೌಧದಲ್ಲಿ ಮತ ಎಣಿಕೆ ನಡೆಯಿತು. ಈ ಹಿಂದೆ ಇಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಗಂಗಾಧರ ಪೂಜಾರಿ ಗೆದ್ದಿದ್ದರು. ಬಳಿಕ ಲೋಕಸಭೆ ಚುನಾವಣೆ ಸಂದರ್ಭ, ಬಿಜೆಪಿ ಸೇರಿದ್ದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಿಜೆಪಿ ತನ್ನ ಅಭ್ಯರ್ಥಿ ಇಂದ್ರೇಶ್ ಪೂಜಾರಿ ಅವರನ್ನು ಕಣಕ್ಕಿಳಿಸಿತ್ತು. ಆದರೆ ಕಾಂಗ್ರೆಸ್ ಮೇಲೆ ಮತದಾರ ತನ್ನ ವಿಶ್ವಾಸವನ್ನು ಮುಂದುವರಿಸಿದ್ದು, ಇಲ್ಲಿ ಕಾಂಗ್ರೆಸ್ ಗೆ ಗೆಲುವಾಗಿದೆ. ಪುರಸಭೆ: ಬಿ.ಕಸ್ಬಾ: ಪುರುಷೋತ್ತಮ ಎಸ್. ಬಂಗೇರ (ಕಾಂಗ್ರೆಸ್) 496, ಇಂದ್ರೇಶ್ ಪೂಜಾರಿ (ಬಿಜೆಪಿ) 456. ನೋಟಾ 9. ಒಟ್ಟು 961 ಮತಗಳು. ಪುರುಷೋತ್ತಮ ಬಂಗೇರ 40 ಮತಗಳಿಂದ ಗೆದ್ದಿದ್ದಾರೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…