ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯದ ಶ್ರೀನಿವಾಸ ಇನ್ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಸಯನ್ಸ್‌ಅಂಡ್ ಇನ್ಫಾರ್ಮೇಶನ್ ಸಯನ್ಸ್ ವತಿಯಿಂದ ಸ್ವಚ್ಛ ಭಾರತ್, ಸ್ವತಂತ್ರ ಭಾರತ್,ಆರೋಗ್ಯ ಭಾರತ್ಕಾರ್ಯಕ್ರಮ ನಡೆಯಿತು.
ನಗರಪಾಲಿಕೆ ಸದಸ್ಯ ಮಾಜಿ ಮೇಯರ್ ದಿವಾಕರ್ ಮುಖ್ಯಅತಿಥಿಯಾಗಿ ಪಾಲ್ಗೊಂಡು ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ಕೊಡಬೇಕು ಎಂದರು. ಡೀನ್ ಪ್ರೊ.ಸುಬ್ರಹ್ಮಣ್ಯ ಭಟ್ ಸಂದೇಶ ನೀಡಿದರು.ಬಿ.ಸಿ.ಎ. ವಿಭಾಗದ ಮುಖ್ಯಸ್ಥ ಡಾ. ಶ್ರೀಧರ ಆಚಾರ್ಯ, ಕಾರ್‍ಯಕ್ರಮದ ಸಂಯೋಜಕರಾದ ಪ್ರೊ.ಅಭಿಷೇಕ್ ವೆರ್ಣೇಕರ್, ಪ್ರೊ.ಸುಧಾರಾಣಿ ಹಾಗೂ ಪ್ರೊ.ಪೂಜಾ ಸಹಕರಿಸಿದರು. ಬಳಿಕ ವಿದ್ಯಾರ್ಥಿಗಳಿಂದ ದೇಶ ಭಕ್ತಿಗೀತೆ, ಮೈಮ್ ಶೋ ನಡೆಯಿತು. ಕಾರ್ಯಕ್ರಮದ ಅಂಗವಾಗಿವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಂದ ಪಾಂಡೇಶ್ವರದ ಓಲ್ಡ್‌ಕೆಂಟ್ ರಸ್ತೆಯ ಉದ್ದಕ್ಕೂ ಸ್ವಚ್ಛತಾ ಕಾರ್ಯ ಹಾಗೂ ಸಾರ್ವಜನಿಕರಿಗೆ ಭಿತ್ತಿ ಪತ್ರ ಪ್ರದರ್ಶನದ ಮೂಲಕ ಸ್ವಚ್ಛತೆಯ ಬಗ್ಗೆ ಸಂದೇಶ ಸಾರಲಾಯಿತು. ಹಾಗೂ ಸರಕಾರಿ ವೆನ್‌ಲಾಕ್ ಆಸ್ಪತ್ರೆಯ ಒಳರೋಗಿಗಳಿಗೆ ಉಚಿತವಾಗಿ ಹಣ್ಣು ಹಂಪಲು ವಿತರಿಸಲಾಯಿತು.