ಬಂಟ್ವಾಳ: ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಮಾಸಿಕ ಸಭೆ ಅಧ್ಯಕ್ಷರಾದ ಬೇಬಿ ಕುಂದರ್ ಅಧ್ಯಕ್ಷತೆಯಲ್ಲಿ ನಡೆಯಿತು. ಕೆರೆ ಅಭಿವೃದ್ದಿಪಡಿಸುವ ಸಲುವಾಗಿ ಸಣ್ಣ ನೀರಾವರಿ ಇಲಾಖೆಯವರಿಗೆ ಮುಂದಿನ ಅಭಿವೃದ್ಧಿ ಜವಾಬ್ದಾರಿ ನೀಡಲು ನಿರ್ಧರಿಸಲಾಯಿತು.
ಸಾರ್ವಜನಿಕರ ಅನುಕೂಲಕ್ಕಾಗಿ ಏಕ ನಿವೇಶನ ಅನುಮೋದನೆಯಲ್ಲಿ ಇರುವ ತೊಡಕು ಸರಿಪಡಿಸಲು ಬುಡಾ ಪ್ರಾಧಿಕಾರದ ವಲಯ ನಿಯಮಾವಳಿ ತಿದ್ದುಪಡಿಗೆ ಅವಕಾಶ ನೀಡುವಂತೆ ಸರಕಾರಕ್ಕೆ ಪತ್ರ ಬರೆಯಲು ನಿರ್ಣಯಿಸಲಾಯಿತು. ಅನಧಿಕೃತ ಕಟ್ಟಡ ಹಾಗೂ ಜಾಗ ಅತಿಕ್ರಮಣ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ನಿರ್ಣಯಿಸಲಾಯಿತು. ಬುಡಾ ಸದಸ್ಯರಾದ ಮನೋಹರ್ ಕುಲಾಲ್, ಅಬ್ದುಲ್ ರಜಾಕ್, ಹರೀಶ್ ಅಜ್ಜಿಬೆಟ್ಟು, ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಬುಡಾ ಕಾರ್ಯದರ್ಶಿ ಎಂ ಪಿ ಅಭಿಲಾಷ್ ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…