ಬಿ.ಸಿ.ರೋಡ್ ನ ಹೋಟೆಲ್ ಬಳಿ ಬೈಕ್ ನಿಲ್ಲಿಸಿ, ಊಟ ಮುಗಿಸಿ ವಾಪಸ್ ಬೈಕ್ ನಿಲ್ಲಿಸಿದ ಸ್ಥಳಕ್ಕೆ ಬಂದಾಗ ಬೈಕ್ ಕಾಣೆಯಾಗಿರುವ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪವನ್ ಕುಮಾರ್ ಎಂಬವರು ಈ ಕುರಿತು ದೂರು ನೀಡಿದ್ದು, ಅದರಂತೆ ಅವರು ಮಂಗಳೂರಿಗೆ ಬೈಕಿನಲ್ಲಿ ಕೆಲಸಕ್ಕೆ ಹೋಗಿ, ರಾತ್ರಿ ಹಿಂತಿರುಗಿ, ಬಿಸಿ ರೋಡಿನಲ್ಲಿರುವ ಚಿಕೋರಿ ಹೋಟೆಲ್ ಬಳಿ ಯಮಾಹಾ ಬೈಕನ್ನು ನಿಲ್ಲಿಸಿ, ಊಟ ಮುಗಿಸಿ ವಾಪಾಸ್ಸು ಬೈಕ್ ನಿಲ್ಲಿಸಿದ ಸ್ಥಳಕ್ಕೆ ಬಂದಾಗ, ಸ್ಥಳದಲ್ಲಿ ಬೈಕ್ ಕಾಣದಿದ್ದು, ಪರಿಸರದಲ್ಲಿ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ. ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಬೈಕಿನ ಅಂದಾಜು ಮೌಲ್ಯ 70,000 ರೂ ಆಗಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಬಗ್ಗೆ ಪವನ್ ಕುಮಾರ್ ಬಂಟ್ವಾಳ ನಗರ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಅ.ಕ್ರ:- 117/2024 ಕಲಂ: 379 ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿರುತ್ತಾರೆ.