ಬಿ.ಸಿ.ರೋಡಿನ ಪ್ರಮುಖ ಹೆಗ್ಗುರುತು ಎನಿಸಿಕೊಂಡಿದ್ದ ರಾಷ್ಟ್ರೀಯ ಹೆದ್ದಾರಿ 75ರ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ತೆರವುಗೊಂಡಿದೆ. ಬಿ.ಸಿ.ರೋಡ್ ನಿಂದ ಬೆಂಗಳೂರು ಕಡೆಗೆ, ಮೂಡುಬಿದಿರೆ ಕಡೆ, ಮಂಗಳೂರು ಕಡೆಗೆ ಹಾಗೂ ಗೂಡಿನಬಳಿ ಕಡೆಗಳಿಗೆ ಈ ವೃತ್ತದ ಮೂಲಕವೇ ಸಾಗಬೇಕಿತ್ತು. ಬಿ.ಸಿ.ರೋಡ್ ಅಡ್ಡಹೊಳೆ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ಆ ಭಾಗದಲ್ಲಿ ಭರದಿಂದ ಕೆಲಸ ಸಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ತೆರವು ಕಾರ್ಯ ನಡೆದಿದೆ.ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ನಿರ್ಮಾಣ ಹಾಗೂ ನಿರ್ವಹಣೆಯನ್ನು ಬಂಟ್ವಾಳ ತಾಲೂಕು ಬಿಲ್ಲವ ಸಂಘ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಸಂಘಕ್ಕೆ ಮಾಹಿತಿ ನೀಡಿ ತೆರವು ಕಾರ್ಯ ನಡೆದಿದೆ. ಮುಂದೆ ಅದೇ ಪ್ರದೇಶದಲ್ಲಿ ಹೊಸ ವೃತ್ತವನ್ನು ನಿರ್ಮಿಸಿ ನಾರಾಯಣ ಗುರುಗಳ ಹೆಸರನ್ನಿಡುವ ಭರವಸೆಯನ್ನೂ ಇಲಾಖೆ ನೀಡಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…