ಕಡೇಶಿವಾಲಯ ಗ್ರಾಮದ ಪತ್ತು ಕೊಡಂಗೆ ವಾಸು ಪೂಜಾರಿ ಧರ್ಮಪತ್ನಿ ಪುಷ್ಪ (ಕುಸುಮ ) 76 ವರ್ಷ ಮೇ.8ರಂದು ಬುಧವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜ, ಅಲ್ಪ ಕಾಲದ ಅಸೌಖ್ಯದಿಂದ ನಿಧನರಾಗಿರುತ್ತಾರೆ.
ಇವರು ಪತಿ, ಹತ್ತು ಜನ ಮಕ್ಕಳು, ಐವರು ಸೊಸೆಯಂದಿರು, ನಾಲ್ವರು ಅಳಿಯಂದಿರು ಹದಿನೇಳು ಮೊಮ್ಮಕ್ಕಳು ಒರ್ವ ಮರಿ ಮೊಮ್ಮಗಳು ಮತ್ತು ಅಪಾರ ಬಂಧು ಭಾಂದವರನ್ನು ಅಗಲಿದ್ದಾರೆ. ದೈವಾಧಿನರಾಗಿರುವ ಪುಷ್ಪಾ ಕೂಡು ಕುಟುಂಬದ ಬಹು ದೊಡ್ಡ ಸಂಸಾರವನ್ನು ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಒಂದೇ ಸೂರಿನಡಿಯಲ್ಲಿ ಸಾಕಿ ಸಲಹಿದ ಮಹಾತಾಯಿಯ ಬದುಕಿನ ಸುವರ್ಣ ಯುಗ 08/05/2024ನೇ ಬುಧವಾರ ಅಸ್ತಂಗತವಾಯಿತು. ತುಂಬಾ ಸೌಮ್ಯ ಸ್ವಭಾವದ ಇವರು ಪ್ರತಿಷ್ಠಿತ *ಅರುವಾರ ಕೊಡಂಗೆ ಗುತ್ತು* ಕುಟುಂಬದ ಹಿರಿಯ ಸದಸ್ಯೆಯಾಗಿದ್ದು ಕುಟುಂಬದ ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು.ಇವರ ಆಗಲುವಿಕೆಯಿಂದ ಕುಟುಂಬದ ಹಾಗೂ ಪತ್ತು ಕೊಡಂಗೆ ಮನೆತನಕ್ಕೆ ತುಂಬಲಾರದ ನಷ್ಟ. ಇವರ ಸಾವಿನ ನೋವನ್ನು ಎದುರಿಸುವ ಶಕ್ತಿಯನ್ನು ಆ ದೇವರು ನೀಡಲಿ, ದಿವಂಗತರ ಆತ್ಮಕ್ಕೆ ಚಿರಶಾಂತಿಯನ್ನು ಪರಮಾತ್ಮ ಕರುಣಿಸಲಿ ಎಂದು ಮನೆಯವರು ಮತ್ತು ಬಂಧುಗಳು ತಿಳಿಸಿದ್ದಾರೆ.