ಬಿ.ಸಿ.ರೋಡು ಕೈಕಂಬದ ಮೊಡಂಕಾಪು ಬಳಿ ಮಂಗಳವಾರ ಸುರಿದ ಗಾಳಿ ಮಳೆಯ ಸಂದರ್ಭ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕಂಬಕ್ಕೆ ಶಾರ್ಟ್‌ಸರ್ಕಿಟ್‌ನಿಂದ ಬೆಂಕಿ ಕಾಣಿಸಿಕೊಂಡು ಟ್ರಾನ್ಸ್‌ಫಾರ್ಮರ್‌ನ ಕಂಬ ಹಾಗೂ ಇದಕ್ಕೆ ಸಂಬಂಧಪಟ್ಟ ವಿದ್ಯುತ್ ತಂತಿಗಳು ಸಂಪೂರ್ಣ ಸುಟ್ಟು ಹೋದವು. ಮೆಸ್ಕಾಂ, ಅಗ್ನಿಶಾಮಕ ಸಿಬಂದಿ ಬೆಂಕಿ ನಂದಿಸಿದರು. ಕೆಲ ಕಾಲ ಇದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಭಾರಿ ಗಾಳಿಯಿಂದಾಗಿ ಕುರಿಯಾಳ ಗ್ರಾಮದ ದೊಂಪದ ಬಳಿ ಎಂಬಲ್ಲಿ ಗಾಳಿ ಮಳೆಗೆ ವಿದ್ಯುತ್ ಕಂಬವು ಬಿದ್ದಿದೆ.