ಕನ್ಯಾನ: ಗವನ್ಗಾರ್ ಕುಟುಂಬದ ಧಾರ್ಮಿಕ ಅನುಷ್ಠಾನಕ್ಕೆ ಅಭಿವೃದ್ಧಿ ಸಾಧನ ಪ್ರತಿಷ್ಠಾನ (ರಿ) ಬುಳೇರಿಕಟ್ಟೆ ಪುತ್ತೂರು ಕುಟುಂಬದ 2024 ನಂತರದ ಅವಧಿಯ ಹೊಸ ಆಡಳಿತ ಮಂಡಳಿಯ ಪ್ರಥಮ ಸಭೆ ಯ ಮೇ 5ರಂದು ಬುಳೇರೀಕಟ್ಟೆಯ ಕುಟುಂಬದ ತರವಾಡು ಮನೆಯಲ್ಲಿ ನಡೆಯಿತು.
ಸಭೆಯಲ್ಲಿ ಡಿ. ಜಯ ರಾಮ ನಾಯ್ಕ ಅವರು ದಾನಪತ್ರ ರೂಪದಲ್ಲಿ ಕೊಡುವ 20 ಸೆಂಟ್ಸ್ ಹಾಗೂ 10 ಸೆಂಟ್ಸ್ ಕ್ರಯ ಪತ್ರ ಜಾಗವನ್ನು ಕುಟುಂಬದ ಹೆಸರಿಗೆ ರಿಜಿಸ್ಟ್ರಾರ್ ಮಾಡಿಕೊಳ್ಳುವ ಬಗ್ಗೆ ಹಾಗೂ ಧಾರ್ಮಿಕ ಪೂಜಾ ಕಾರ್ಯಕ್ರಮಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು.ಸಭೆಯಲ್ಲಿ ಅಧ್ಯಕ್ಷರಾದ ಶಿವಣ್ಣ ನಾಯ್ಕ್ ಆನೆಕಲ್ಲು. ಉಪಾಧ್ಯಕ್ಷರಾಗಿ ಆನಂದ ನಾಯ್ಕ್.ಪಜೀರ್. ಸೀತಾರಾಮ ನಾಯ್ಕ್.ಕೆಮ್ಮಾಯಿ. ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಕೊಕ್ಕಡ. ಜೊತೆ ಕಾರ್ಯದರ್ಶಿ ಲಕ್ಷ್ಮಣ್ ನಾಯ್ಕ್ ಬೊಳ್ವಾರ್. ಕೋಶಾಧಿಕಾರಿ ಗೋಪಾಲಕೃಷ್ಣ ಪಡೀಲ್. ಸಂಘಟನಾ ಕಾರ್ಯದರ್ಶಿ ಮಾಧವ ಪಡೀಲ್. ಹಾಗೂ ಸದಸ್ಯರಾಗಿ ಬಾಲಕೃಷ್ಣ ಪಡೀಲ್, ವಿಶ್ವನಾಥ ಸೂತ್ರಬೆಟ್ಟು, ಭಾಸ್ಕರ್ ನಾಯ್ಕ್ ಕಬಕ, ಜೀವನ್ ಪೆರ್ಲ, ಗಂಗಾಧರ ಕನ್ಯಾನ , ವಿನೋದ್ ಕನ್ಯಾನ, ಸುಂದರ ಮೊಟ್ಟೆತಡ್ಕ, ಶಕುಂತಲಾ ಪುರುಷರಕಟ್ಟೆ, ಸುಮತಿ ಚಂದಪ್ಪ, ಅಮಿತಾ ಲಕ್ಷ್ಮಣ್, ಸದಾನಂದ ಬುಲೇರಿಕಟ್ಟೆ , ರೇಷ್ಮ ಬುಲೇರಿಕಟ್ಟೆ, ನಿತೀಶ್ ಪಡೀಲ್. ಶ್ರೀಕೃಷ್ಣ ನಾಯ್ಕ್ ಕೋಡಿಂಬಾಳ, ಸೀನ ನಾಯ್ಕ್ ಪಡೀಲ್ , ಮನೋಜ್ ಕಾಸರಗೋಡು, ನಳಿನಾಕ್ಷಿ ಜಯರಾಮ್ ಮುಂತಾದವರು ಉಪಸ್ಥಿತರಿದ್ದರು.
ವರದಿ: ಗಂಗಾಧರ್ ಕನ್ಯಾನ