ಬಂಟ್ವಾಳ

ಬಂಟ್ವಾಳ ರೋಟರಿ ಕ್ಲಬ್ ಸಂಸ್ಥಾಪನಾ ದಿನಾಚರಣೆ

ರೋಟರಿ ಕ್ಲಬ್ ಬಂಟ್ವಾಳದ 55ನೇ ಸಂಸ್ಥಾಪನ ದಿನವನ್ನು ಬುಧವಾರ ಸಂಜೆ ರೋಟರಿ ಕ್ಲಬ್ ಬಂಟ್ವಾಳದ ಸಭಾಂಗಣದಲ್ಲಿ ಆಚರಿಸಲಾಯಿತು.

ಜಾಹೀರಾತು

ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ ಪ್ರಕಾಶ್ ಬಾಳಿಗ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಕಟಪೂರ್ವ ಜಿಲ್ಲಾ ಗವರ್ನರ್, ಕ್ಲಬ್‌ನ ಪೂರ್ವಾಧ್ಯಕ್ಷ ಎನ್.ಪ್ರಕಾಶ್ ಕಾರಂತ್ ಅನಿಸಿಕೆ ವ್ಯಕ್ತಪಡಿಸಿ ೫೫ ವರ್ಷಗಳಲ್ಲಿ ರೋಟರಿ ಕ್ಲಬ್ ಬಂಟ್ವಾಳ ನಡೆದು ಬಂದ ಹಾದಿಯನ್ನು ಅವಲೋಕನ ಮಾಡುವುದರ ಜೊತೆಗೆ ಕ್ಲಬ್‌ನ ಬೆಳವಣಿಗೆಗೆ ಸಹಕರಿಸಿದವರನ್ನು ಸ್ಮರಿಸಿಕೊಳ್ಳಬೇಕು ಹಾಗೂ ನಾವು ಇನ್ನು ಮುಂದೆ ಕ್ರಮಿಸಬೇಕಾದ ದಾರಿಯ ಬಗ್ಗೆ ಯೋಜನೆ ರೂಪಿಸಬೇಕು ಎಂದು ತಿಳಿಸಿದರು.

ರೋಟರಿ ಸಹಾಯಕ ಗವರ್ನರ್ ಲಾರೆನ್ಸ್ ಗೋನ್ಸ್ವಾಲಿಸ್ ಅತಿಥಿಯಾಗಿ ಭಾಗವಹಿಸಿ ಮಾತನಾಡಿ  ಕ್ಲಬ್ ನಡೆದು ಬಂದ ಹಾದಿಯ ಸಿಂಹಾವಲೋಕನ ಮಾಡುವುದು ಉತ್ತಮವಾದ ಕಾರ್ಯ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಿಸ್ ಟೀನ್ ಗ್ಲೋಬಲ್ ವರ್ಲ್ಡ್ ಇಂಡಿಯಾ ಓಸಿಯಾನ ೨೦೨೪ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ  ಮಂಗಳೂರಿನ ಇಷಿಕಾ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಇಷಿಕಾ ಶೆಟ್ಟಿ ಅವರು ಯುವ ಸಮುದಾಯ ಜಗತ್ತಿನ ಭವಿಷ್ಯವಾಗಿದ್ದು ಯುವ ಸಮುದಾಯಕ್ಕೆ ಸರಿಯಾದ ಮಾಗದರ್ಶನ ಸಿಕ್ಕಿದರೆ ಅವರು ದೇಶದ ಆಸ್ತಿಯಾಗುತ್ತಾರೆ ಎಂದರು. ರೋಟರಿ ಕ್ಲಬ್ ಬಂಟ್ವಾಳ ನನ್ನ ಸಾಧನೆಯನ್ನು ಗುರುತಿಸಿ ಗೌರವಿಸಿರುವುದು ಸಂತೋಷ ನೀಡಿದೆ ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಬಂಟ್ವಾಳದ ಪೂರ್ವಾಧ್ಯಕ್ಷರನ್ನು ಗೌರವಿಸಲಾಯಿತು. ಮನೋರಂಜನಾ ಆಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕೇಕ್ ಕತ್ತರಿಸಿ ೫೫ನೇ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು. ವಲಯ ಲೆಫ್ಟಿನೆಂಟ್ ರವೀಂದ್ರ ದರ್ಬೆ, ಮಾತೃ ಘಟಕ ಮಂಗಳೂರು ರೋಟರಿ ಕ್ಲಬ್‌ನ ಅಧ್ಯಕ್ಷ ಕಿಶನ್, ಕ್ಲಬ್‌ನ ನಿಯೋಜಿತ ಅಧ್ಯಕ್ಷ ಬೇಬಿ ಕುಂದರ್ ಉಪಸ್ಥಿತರಿದ್ದರು. ಡಾ. ವಸಂತ ಬಾಳಿಗ, ಬಿ.ರಾಮಚಂದ್ರ ರಾವ್, ಡಾ. ರಮೇಶಾನಂದ ಸೋಮಯಾಜಿ, ಅಶ್ವನಿ ಕುಮಾರ್ ರೈ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯದರ್ಶಿ ಸದಾಶಿವ ಬಾಳಿಗ ವರದಿ ವಾಚಿಸಿ, ವಂದಿಸಿದರು.  

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.