ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟ ಶುಕ್ರವಾರ ಬಂಟ್ವಾಳದ ಬಿಜೆಪಿ ಕಚೇರಿಗೆ ಆಗಮಿಸಿ, ಪ್ರಮುಖರೊಂದಿಗೆ ಸಭೆ ನಡೆಸಿದರು.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾನು ಆಯ್ಕೆಯಾಗಿರುವುದು ಸಹಜವಾಗಿ ಸಂತಸ ತಂದಿದೆ. ತುಳುವ ನಾಡಿನ ಪುಣ್ಯ ಭೂಮಿಯ ಧರ್ಮ ರಕ್ಷಣೆ ಮತ್ತು ಅಭಿವೃದ್ಧಿ ನನ್ನ ಮುಂದಿನ ಗುರಿ. ಕಾರ್ಯಕರ್ತರ ಕಷ್ಟಗಳಿಗೆ, ನೋವುಗಳಿಗೆ ಸ್ಪಂದಿಸುವವನಾಗಿ ಜೊತೆಯಲ್ಲಿರುತ್ತೇನೆ. ಬಂಟ್ವಾಳ ಕ್ಷೇತ್ರದ ಸವಾಲುಗಳೇನು, ಕಾರ್ಯಕರ್ತರ ಭಾವನೆಗಳೇನು ಎಂಬುವುದರ ಅರಿವು ನನಗಿದೆ. ಈ ಚುನಾವಣಾ ಮಹಾ ಸಮರದಲ್ಲಿ ನಾವೆಲ್ಲಾ ಒಂದಾಗಿ ಶ್ರಮಿಸಿ ಜಯಗಳಿಸೋಣ ಎ೦ದು ಚೌಟ ಹೇಳಿದರು.
ಈ ಸಂದರ್ಭ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ಯು.ನಾಯ್ಕ್, ನಮಗೆ ಗೆಲುವು ನಿಶ್ಚಿತ. ಆದರೆ ಮೈಮರೆವು ಸಲ್ಲದು. ಮುಂದಿನ ದಿನಗಳಲ್ಲಿ ಕ್ಷೇತ್ರದ ಪ್ರತಿ ಗ್ರಾಮಗಳಿಗೆ ಪ್ರವಾಸ ಮಾಡಿ, ಜನಜಾಗೃತಿಗೊಳಿಸುವ ಮೂಲಕ ನರೇಂದ್ರ ಮೋದಿಯವರನ್ನು 3 ನೇ ಭಾರಿ ಪ್ರಧಾನಿ ಮಾಡುವುದಕ್ಕಾಗಿ ಬ್ರಿಜೇಶ್ ಚೌಟರನ್ನು ಸಂಸದರಾಗಿ ಗೆಲ್ಲಿಸೋಣ ಎ೦ದರು.
ಕ್ಷೇತ್ರಾಧ್ಯಕ್ಷರಾದ ದೇವಪ್ಪ ಪೂಜಾರಿ ಮಾತನಾಡಿ, ಕಳೆದ ಭಾರಿ ಬಂಟ್ಟಾಳದಲ್ಲಿ ನಳಿನ್ ಕುಮಾರ್ ಕಟೀಲ್ ರವರಿಗೆ 31000 ಮತಗಳ ಮುನ್ನಡೆ ದೊರಕಿತ್ತು. ಈ ಸಲ 50000 ಮತಗಳ ಮುನ್ನಡೆಯೊಂದಿಗೆ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಕಾರ್ಯಕರ್ತರಾದ ನಾವೆಲ್ಲ ಶ್ರಮಿಸೋಣ ಎ೦ದರು.
ವೇದಿಕೆಯಲ್ಲಿ ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಪೂಜಾ ಪೈ, ಪ್ರಮುಖರಾದ ಯತೀಶ್ ಆರ್ವರ್, ಹರಿಕೃಷ್ಣ ಬಂಟ್ವಾಳ, ವಿಕಾಸ್ ಪುತ್ತೂರು, ಸಂದೇಶ್ ಶೆಟ್ಟಿ, ರವೀಶ್ ಶೆಟ್ಟಿ, ಡೊಂಬಯ ಅರಳ, ಆರ್. ಚೆನ್ನಪ್ಪ ಕೋಟ್ಯಾನ್ ಉಪಸ್ಥಿತರಿದ್ದರು.
ಪ್ರಮುಖರಾದ ಸುಲೋಚನಾ ಜಿ.ಕೆ.ಭಟ್, ರಾಮದಾಸ್ ಬಂಟ್ವಾಳ್, ತುಂಗಪ್ಪ ಬಂಗೇರ ಸಂಜಯ ಪ್ರಭು, ದೇವದಾಸ್ ಶೆಟ್ಟಿ, ದಿನೇಶ್ ಅಮ್ಟೂರು, ಲಕಿತಾ ಶೆಟ್ಟಿ, ವಸಂತ ಪೂಜಾರಿ, ಕಮಲಾಕ್ಷಿ ಪೂಜಾರಿ, ಮಾದವ ಮಾವೆ, ಗಣೇಶ್ ರೈ ಚಿದಾನಂದ ರೈ ಸೀತಾರಾಮ ಪೂಜಾರಿ, ರಮಾನಾಥ ರಾಯಿ, ಪುರುಷೋತ್ತಮ ಶೆಟ್ಟಿ, ಜಯರಾಮ ನಾಯ್ಕ ರೋನಾಲ್ಡ್ ಡಿ ಸೋಜಾ ಚಂದ್ರಾವತಿ ಪೊಳಲಿ, ಹರ್ಷಿಣಿ, ಭಾರತಿ ಚೌಟ, ಮಮತಾ ಬಾಳ್ತಿಲ, ಶೋಭಾ ಬೋಳಂತೂರು, ರಂಜಿತ್ ಮೈರ, ಯಶೋಧರ ಕರ್ಬೆಟ್ಟು, ಮೋಹನ್ ಪಿ ಎಸ್, ಆನಂದ ಶಂಭೂರು, ವಿಶ್ವನಾಥ ಪೂಜಾರಿ ಕಟ್ಟತ್ತಿಲ ಮುಂತಾದವರು ಭಾಗವಹಿಸಿದ್ದರು.