ಕಡೇಶಿವಾಲಯದ ರೋಟರಿ ಸಮುದಾಯ ದಳದ 35 ನೇ ವಾರ್ಷಿಕೋತ್ಸವ, ಸನ್ಮಾನ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಪೆರ್ಲಾಪು ಶಾಲಾ ವಠಾರದಲ್ಲಿ ನಡೆಯಿತು.
ಸಭಾಧ್ಯಕ್ಷರಾಗಿ ರೋಟರಿ ಕ್ಲಬ್ ಬಂಟ್ವಾಳ ನಿಯೋಜಿತ ಅಧ್ಯಕ್ಷರಾದ ಬೇಬಿ ಕುಂದರ್ ಅತಿಥಿಗಳಾಗಿ, ಭೂ ಅಭಿವೃದ್ದಿ ಬ್ಯಾಂಕ್ ಬಿ. ಸಿ.ರೋಡ್ ಅಧ್ಯಕ್ಷ ಅರುಣ್ ರೋಶನ್ ಡಿ’ ಸೋಜಾ, ಲಯನ್ಸ್ ಕ್ಲಬ್ ಮಾಣಿ ಅಧ್ಯಕ್ಷರಾದ ಕೂಸಪ್ಪ ಪೂಜಾರಿ ಪುನ್ಕೆದಡಿ, ಝೋಲನ್ ಲೆಫ್ಟಿನೆಂಟ್ ಗವರ್ನರ್ ಪುಷ್ಪರಾಜ್ ಹೆಗ್ಡೆ ಸತ್ತಿಕಲ್ಲು, ರೋಟರಿ ಸಮುದಾಯ ದಳದ ಅಧ್ಯಕ್ಷ ಕಿಶೋರ್ ಕುಮಾರ್ ಬಿ. ಭಾಗವಹಿಸಿದ್ದರು.
ವೇದಿಕೆಯಲ್ಲಿ ಕಡೇಶಿವಾಲಯ ಗ್ರಾಮದ ದ.ಕ. ಜಿ. ಪ. ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯಲ್ಲಿ ಹಾಗೂ ಸರಕಾರಿ ಪ್ರೌಡಶಾಲೆ ಕಡೇಶಿವಾಲಯದಲ್ಲಿ ಎಸ್. ಎಸ್. ಎಲ್. ಸಿ. ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳ ಪ್ರತಿಭೆ ಪುರಸ್ಕರಿಸಲಾಯಿತು., ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಭವಾನಿ ನೆಕ್ಕಿಲಾಡಿ ಅವರನ್ನು ಸನ್ಮಾನಿಸಲಾಯಿತು., ದ. ಕ. ಜಿಲ್ಲಾ ಅತ್ಯುತ್ತಮ ಪ್ರೌಢಶಾಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಗೋಪಾಲಕೃಷ್ಣ ನೇರಳಕಟ್ಟೆ ಮತ್ತು ಸರಕಾರಿ ಪ್ರೌಢಶಾಲೆ ಕಡೇಶಿವಾಲಯದ ಶಿಕ್ಷಕಿಯಾದ ಗೀತಾ ಅವರನ್ನು ಅಭಿನಂದಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಜಿ. ವಿ. ಡ್ಯಾನ್ಸ್ ಕ್ರಿವ್ ಕಡೇಶಿವಾಲಯ ಅವರಿಂದ ನೃತ್ಯ ಕಾರ್ಯಕ್ರಮ ಮತ್ತು ಶಾರದಾ ಆರ್ಟ್ಸ್ ಐಸಿರಿ ಕಲಾವಿದರ್ ಮಂಜೇಶ್ವರ ಅಭಿನಯದ ಮಲ್ಲ ಸಂಗತಿಯೇ ಅತ್ತು ಎಂಬ ನಾಟಕ ನಡೆಯಿತು.
ಅತಿಥಿಗಳನ್ನು ಸಂಸ್ಥೆಯ ಸಲಹಾ ಸಮಿತಿಯ ಚೇರ್ ಮ್ಯಾನ್ ಕೆ. ಕೆ. ಶೆಟ್ಟಿ ಕುರುಂಬ್ಲಾಜೆ ಸ್ವಾಗತಿಸಿ,ಸಂಸ್ಥೆಯ ಕಾರ್ಯದರ್ಶಿ ಜಹೀರ್ ಪ್ರತಾಪನಗರ ವಂದಿಸಿದರು. ನವೀನ್ ನಾಯ್ಕ್ ಪಿಳಿಂಗಳ ಮತ್ತು ಯೋಗೀಶ್ ನಾಯ್ಕ್ ಡಿ. ಕಾರ್ಯಕ್ರಮ ನಿರೂಪಿಸಿದರು.