ಬಂಟ್ವಾಳ: ಡಿಸೆಂಬರ್ 4ರ ಕಾರ್ತಿಕ ಸೋಮವಾರ ನರಹರಿ ಪರ್ವತ ಸದಾಶಿವ ದೇವರಿಗೆ ಸಹಸ್ರ ಬೊಂಡ ಅಭಿಷೇಕ ನಡೆಯಲಿದೆ. ಮೆಲ್ಕಾರ್ ಸಮೀಪದ ಸಾವಿರ ಆಡಿ ಎತ್ತರದ ನರಹರಿ ಪರ್ವತ ಸದಾಶಿವ ದೇವಸ್ಥಾನಕ್ಕೆ ಸಂಬಂಧಿಸಿದ ಅಮ್ಟೂರು ಗೋಳ್ತಮಜಲು, ಬೊಂಡಾಲ, ಶಂಭೂರು, ಪಾಣೆಮಂಗಳೂರು ಗ್ರಾಮಗಳ ಅಂದಾಜು 1200 ಮನೆಗಳ ನಗರ ಭಜನೆ ಪೂರ್ತಿಗೊಂಡಿದ್ದು ಡಿಸೆಂಬರ್ 4ರಂದು ಬೆಳಿಗ್ಗೆ 9ರಿಂದ 12 ಗಂಟೆವರೆಗೆ ಸಾರ್ವಜನಿಕ ಸಹಸ್ರ ಬೊಂಡ ಅಭಿಷೇಕ ವಿಜೃಂಭನೆಯಿಂದ ನಡೆಯಲಿರುವುದು. ಇದರ ಫಲವಾಗಿ ಭಕ್ತಾಧಿಗಳಿಗೆ ಸುಖ ಶಾಂತಿ ಸಮೃದ್ಧಿ ಹಾಗೂ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಶೀಘ್ರವಾಗಿ ಪೂರ್ಣಗೊಳ್ಳುವುದೆಂದು ಪ್ರಶ್ನಾ ಚಿಂತನೆಯಲ್ಲಿ ತಿಳಿದು ಬಂದಿದೆ. ಆದ್ದರಿಂದ ಹೆಚ್ಚಿನ ಭಕ್ತಾಧಿಗಳು ಈ ಕಾರ್ಯಕ್ರಮದಲ್ಲಿ ಮೋಕ್ತೆಸರರಾದ ಡಾ. ಪ್ರಶಾಂತ್ ಮಾರ್ಲ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಡಾ. ಆತ್ಮರಂಜನ್ ರೈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…