ಬಂಟ್ವಾಳ

ರೈತರ ಕೃಷಿ ಪಂಪ್ ಸೆಟ್ಟ್ ಗಳಿಗೆ ಮೂಲ ಸೌಕರ್ಯ ಎಸ್ಕಾಂಗಳು ಭರಿಸಲು ಆಗ್ರಹ

ಜಾಹೀರಾತು

 

ರೈತರ ಕೃಷಿ ಪಂಪ್ ಸೆಟ್ಟ್ ಗಳಿಗೆ ಮೂಲ ಸೌಕರ್ಯ ವಿದ್ಯುತ್ ಸರಬರಾಜು ಕಂಪೆನಿಗಳು ಭರಿಸಲು ಸಿದ್ಧಕಟ್ಟೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಆಗ್ರಹಿಸಿದ್ದಾರೆ. ಈ ಕುರಿತು ಅವರು ಇಂಧನ ಸಚಿವರಿಗೆ ಪತ್ರ ಬರೆದಿದ್ದಾರೆ.

ರಾಜ್ಯದಲ್ಲಿ ಹಲವಾರು ಕುಟುಂಬಗಳು ಕೃಷಿ ಅವಲಂಬಿತವಾಗಿವೆ. ರಾಜ್ಯದ ಆರ್ಥಿಕ ಅಭಿವೃದ್ದಿಯ ಬಹುಪಾಲು ಕೃಷಿಕ ಕ್ಷೇತ್ರದಿಂದ ಜರಗುತ್ತಿರುವುದಾಗಿದೆ. ಇತ್ತೀಚಿಗೆ ಅನಾವೃಷ್ಟಿ,ಅತಿವೃಷ್ಟಿ ಹಾಗೂ ನಾನಾ ತರದ ಪ್ರಾಕೃತಿಕ ವಿಕೋಪಗಳಿಂದ ರೈತರು ಬೆಳೆಯುವ ಬೆಳೆಗಳು ಹಾನಿಗೊಳಗಾಗಿದ್ದು, ಅಪಾರ ನಷ್ಟವನ್ನು ರೈತರು ಅನುಭವಿಸುತ್ತಿದ್ದಾರೆ. ರಸ ಗೊಬ್ಬರದ ಬೆಲೆ, ಇನ್ನಿತರ ಕೃಷಿ ಉಪಯೋಗಿ ವಸ್ತುಗಳನ್ನು ಬಳಸಿಕೊಂಡು ಕೃಷಿ ಕ್ಷೇತ್ರದಲ್ಲಿ ರೈತರಿಗೆ ಲಾಭ ಪಡೆಯಲು ಕಷ್ಟವಾಗುತ್ತಿದೆ. ಹಾಗೂ ಕೃಷಿ ಸಂಬಂಧಿ ವಿವಿಧ ಬ್ಯಾಂಕುಗಳಿಂದ ಸಾಲವನ್ನು ಪಡೆದಿರುವ ರೈತರು ಸಾಲವನ್ನು ಮರುಪಾವತಿ ಮಾಡಲಾಗದೆ ಕಂಗಲಾಗಿದ್ದಾರೆ. ಈ ಹಿನ್ನಲೆಯಲ್ಲಿ ಇಷ್ಟರವರೆಗೆ ಕೃಷಿ ಕ್ಷೇತ್ರಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಕೃಷಿಕರ ಪಂಪ್ ಸೆಟ್ಟ್ ಗಳಿಗೆ ಉಚಿತ ವಿದ್ಯುತ್ ವ್ಯವಸ್ಥೆ ನೀಡುವುದರೊಂದಿಗೆ ರೈತರಿಗೆ ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯಲು ಅವಶ್ಯಕವಾದ ಮೂಲ ಸೌಕರ್ಯಗಳನ್ನು ಸರಕಾರದ ವತಿಯಿಂದ ಆಯಾಯಾ ವಿದ್ಯುತ್ ಸರಬರಾಜು ಕಂಪೆನಿಗಳೇ ನೀಡುತ್ತಾ ಬಂದಿರುವುದಾಗಿದೆ ಎಂದವರು ತಿಳಿಸಿದ್ದಾರೆ.

ಕಾಂಗ್ರೆಸ್ ನೇತೃತ್ವದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸರಕಾರ ಸೆ.22 ನಂತರ ನೋಂದಾಯಿಸಿದ ಕೃಷಿಕರ ಐಪಿ ಪಂಪ್ ಸೆಟ್ಟ್ ಗಳಿಗೆ ಮೂಲ ಸೌಕರ್ಯವನ್ನು ನೀಡುವುದನ್ನು ಹಿಂಪಡೆದು ರೈತರು ಸ್ವಯಂ ಕಾರ್ಯನಿರ್ವಹಣೆಯಡಿ ಭರಿಸುವಂತೆ ಆದೇಶ ಹೊರಡಿಸಿರುವುದು ದೇಶದ ಬೆನ್ನೆಲುಬಾಗಿರುವ ರೈತನಿಗೆ ಏಟು ಕೋಟ್ಟಾಂತ್ತಾಗಿದೆ ಇದು ಖಂಡನೀಯವಾಗಿದ್ದು,ಮುಂದಿನ ದಿನಗಳಲ್ಲಿ ರೈತರ ಆತ್ಮಹತ್ಮೆಗೆ ಎಡೆಮಾಡಿದಂತಾಗಿದೆ ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ.

ತಕ್ಷಣದಿಂದ ಸರಕಾರದ ತೀರ್ಮಾನವನ್ನು ಹಿಂಪಡೆದು ಈ ಹಿಂದಿನ ಮಾದರಿಯಲ್ಲಿ ವಿದ್ಯುತ್ ಸರಬರಾಜು ಕಂಪೆನಿಗಳೇ  ರೈತರ ಕೃಷಿ ಪಂಪ್ ಸೆಟ್ಟ್ ಗಳಿಗೆ ಅವಶ್ಯಕವಾದ ಮೂಲ ಸೌಕರ್ಯವನ್ನು ನೀಡುವಂತೆ ಸರಕಾರವನ್ನು ಆಗ್ರಹಪಡಿಸಿದ್ದಾರೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

View Comments

  • ನನಗೆ ತಿಳಿದಿರುವಂತೆ ಮುಂಚೆಯೂ ಕೃಷಿಕರು ದುಬಾರಿ ಶುಲ್ಕವನ್ನು ಪಾವತಿಸುತ್ತಿದ್ದರು. ಮೂರು ವರ್ಷದ ಹಿಂದೆ ಪರಿಚಯದವರು ಕೇವಲ ಒಂದು ಲೈನಿನ ಪಂಪಿಗೆ ಅಂದಾಜು 20,000 ರೂಪಾಯಿ ಶುಲ್ಕ ಪಾವತಿಸಿದ್ದಾರೆ. ಇದು ಕೃಷಿಕರಿಗೆ ವಿಪರೀತ ಹೊರೆಯಾಗಿದ್ದು ಸರಕಾರದ ಬೇಜವಾಬ್ದಾರಿ ಧೋರಣೆ ಆಗಿದೆ.

Recent Posts