ಫರಂಗಿಪೇಟೆ

ನ.14ರಿಂದ ನ.22ರವರೆಗೆ ಶ್ರೀ ರಾಧಾ ಸುರಭಿ ಗೋಮಂದಿರದಲ್ಲಿ ಅಷ್ಟೋತ್ತರ ಶತ (108) ಶ್ರೀಮದ್ಭಾಗವತ ಕಥಾ ಪಾರಾಯಣ ಸಪ್ತಾಹ ಮಹಾಯಾಗ, ಗೋ ನವರಾತ್ರಿ ಉತ್ಸವ, 1108 ನಾರಾಯಣ ಕವಚ ಯಾಗ

ಜಾಹೀರಾತು

ದಕ್ಷಿಣ ಭಾರತದಲ್ಲಿಯೇ ಪ್ರಥಮ ಬಾರಿಗೆ ಅಷ್ಟೋತ್ತರ ಶತ (108) ಶ್ರೀಮದ್ಭಾಗವತ ಕಥಾ ಪಾರಾಯಣ ಸಪ್ತಾಹ ಮಹಾಯಾಗ ಮತ್ತು ಗೋ ನವರಾತ್ರಿ ಉತ್ಸವ ಹಾಗೂ 1108 ನಾರಾಯಣ ಕವಚ ಯಾಗ ನ.14ರಿಂದ ನ.22ರವರೆಗೆ ಉಡುಪಿ ಅದಮಾರು ಮಠದ  ಶ್ರೀ ಈಶಪ್ರಿಯ  ತೀರ್ಥ ಶ್ರೀಪಾದಂಗಳವರ ಗೌರವ ಮಾರ್ಗದರ್ಶನದಲ್ಲಿ ಭಕ್ತಿಭೂಷಣದಾಸ ಪ್ರಭೂಜಿ ಹಾಗೂ ವೃಂದಾವನದ ಶ್ರೀ ರಮೇಶ ಗೋಸ್ವಾಮಿಯವರ ನೇತೃತ್ವದಲ್ಲಿ ನಡೆಯಲಿದೆ.

ಎಲ್ಲಿ ನಡೆಯಲಿದೆ ಕಾರ್ಯಕ್ರಮ ವಿವರಗಳಿಗೆ ಮುಂದೆ ಓದಿರಿ

ಬಂಟ್ವಾಳ ತಾಲೂಕಿನ  ಪುದು ಗ್ರಾಮದ ಗೋವಿನತೋಟ ಬ್ರಹ್ಮಗಿರಿಯ ಶ್ರೀ ರಾಧಾಸುರಭಿ ಗೋಮಂದಿರದಲ್ಲಿ ರಾಷ್ಟ್ರೀಯ ಗೋ ಸೇವಾ ಸಂಸ್ಥಾನ, ಗೋ ಸೇವಾ ಗತಿವಿಧಿ ಕರ್ನಾಟಕ ಸಂಯುಕ್ತ ಆಶ್ರಯದಲ್ಲಿ ಲೋಕ ಕಲ್ಯಾಣಾರ್ಥ ಸನಾತನ ಧರ್ಮದ ಉಳಿವಿಗಾಗಿ, ಭಕ್ತಜನರಲ್ಲಿ ಶ್ರೀಮಧ್ಭಾಗವತ ಮತ್ತು ಗೋವಿನ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಯಲಿದೆ.

ಅಷ್ಟೋತ್ತರ ಶತ ಶ್ರೀಂದ್ಭಾಗವತ ಕಥಾ ಪಾರಾಯಣ ಸಪ್ತಾಹ ಮಹಾಯಜ್ಞ ಸಮಿತಿ ಕಾರ್ಯಾಧ್ಯಕ್ಷ ತೇವು ತಾರಾನಾಥ ಕೊಟ್ಟಾರಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ನ.14 ಮಂಗಳವಾರ ತೋರಣ ಮುಹೂರ್ತ, ಗಣಪತಿ ಹವನ, ಸುಂದರ ಕಾಂಡ ಪಾರಾಯಣ, ಉಗ್ರಾಣ ಮುಹೂರ್ತ, ಬಳಿಗ್ಗೆ 11.30 ರಿಂದ ಗೋವರ್ಧನ ಪೂಜೆ, ಛಪ್ಪನ್ ಭೋಗ್, ಮಹಾಪ್ರಸಾದ ನಡೆಯಲಿದೆ.  ಮಧ್ಯಾಹ್ನ 3ಗಂಟೆಗೆ ಫರಂಗಿಪೇಟೆ ಶ್ರೀ ವರದೇಶ್ವರ ದೇವಸ್ಥಾನದಿಂದ 108 ಶ್ರೀಮಧ್ಭಾಗವತ ಗ್ರಂಥ ಹಾಗೂ ಹಸಿರು ಹೊರೆಕಾಣಿಕೆ ಶೋಭಾಯಾತ್ರೆ ರಾಧ ಸುರಭಿಗೋ  ಮಂದಿರಕ್ಕೆ ಆಗಮಿಸಲಿದೆ. ಸಂಜೆ 6.45ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ ನ.15ರಿಂದ ನ.21ರವರೆಗೆ 108 ಶ್ರೀಮದ್ಭಾಗವತ ಪಾರಾಯಣ, 108ಶ್ರೀನಾರಾಯಣ ಕವಚ ಯಾಗ, ವೃಂದಾವನದ ಶ್ರೀ ಬ್ರಿಜೇಶ ಗೋಸ್ವಾಮಿ ಅವರಿಂದ  ಶ್ರೀಮಧ್ಭಾಗವತ ಕಥಾ ಸಪ್ತಾಹ, ಶೋಭಾ ಮಯ್ಯ ಮಂಗಳೂರು ಅವರಿಂದ ಶ್ರೀ ಭಗವದ್ಗೀತಾ ಕಥಾ ಸಪ್ತಾಹ, ಶ್ರೀ ಭಕ್ತಿ ಭೂಷಣದಾಸ ಪ್ರಭೂಜಿ ಅವರಿಂದ ಶ್ರೀಮದ್ಭಾಗವತಾ ಕಥಾ ಸಪ್ತಾಹ ನ.22ರಂದು ಬುಧವಾರ ಯಾಗದ ಪೂರ್ಣಾಹುತಿ, ಸಮಾರೋಪ ನಡೆಯಲಿದೆ ಎಂದು ತಿಳಿಸಿದರು.

ಶ್ರೀ ಭಕ್ತಿ ಭೂಷಣದಾಸ ಪ್ರಭೂಜಿ ಸಮಿತಿಯ ಅಧ್ಯಕ್ಷ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ಕಾರ್ಯಕ್ರಮಕ್ಕೆ ಸಾರ್ವಜನಿಕರ ಪಾಲುಗೊಳ್ಳುವ ಮೂಲಕ ಇದರ ಫಲವನ್ನೂ ಪಡೆದುಕೊಳ್ಳಬಹುದು ಎಂದರು. ಕೋಶಾಧಿಕಾರಿ ಪದ್ಮನಾಭ ಶೆಟ್ಟಿ ಪುಂಚಮೆ, ಪ್ರಧಾನ ಕಾರ್ಯದರ್ಶಿ ದಾಮೋದರ ನೆತ್ತರಕೆರೆ, ಮಾತೃ  ಸಮಿತಿ ಸಂಚಾಲಕಿ ಜಯಶ್ರೀ ಕರ್ಕೇರಾ ಅಬ್ಬೆಟ್ಟು, ಕಾರ್ಯಲಯ ಸಮಿತಿ ಸಂಚಾಲಕ ವಿನಯ್ ಕುಮಾರ್  ಕಡೆಗೋಳಿ, ಉಪಾಧ್ಯಕ್ಷ ಗಣೇಶ್ ಸುವರ್ಣ ತುಂಬೆ, ಪ್ರಚಾರ ಸಮಿತಿ ಸಂಚಾಲಕ ದಿನೇಶ್ ಶೆಟ್ಟಿ ಕೊಟ್ಟಿಂಜ, ಸದಸ್ಯ ಸಂತೋಷ್ ಕುಲಾಲ್ ನೆತ್ತರೆಕೆರೆ ಉಪಸ್ಥಿತರಿದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.