ಬಂಟ್ವಾಳ

ಬಂಟ್ವಾಳ: ಶಾರದೋತ್ಸವ ಆರಂಭ

ಶ್ರೀ ತಿರುಮಲ ವೆಂಕಟ್ರಮಣ ಸ್ವಾಮಿ ಕೃಪಾ ಶ್ರೀ ಗಣೇಶೋತ್ಸವ ಹಾಗೂ ಶ್ರೀ ಶಾರದೋತ್ಸವ ಸಮಿತಿ ಬಂಟ್ವಾಳ ವತಿಯಿಂದ ಶಾರದಾ ಪೂಜಾ ಮಹೋತ್ಸವ ಅಕ್ಟೋಬರ್ 19ರಿಂದ ಆರಂಭಗೊಂಡಿದೆ. ಅಕ್ಟೋಬರ್ 25ರವರೆಗೆ ಶ್ರೀ ಶಾರದಾ ಮಹೋತ್ಸವವನ್ನು ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ  ವಠಾರದಲ್ಲಿ ವಿವಿಧ ವೈದಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತಿದೆ.

ಗುರುವಾರ ರಾತ್ರಿ ಶ್ರೀ ಶಾರದಾ ಮಾತೆಯ ವಿಗ್ರಹವನ್ನು ಶ್ರೀ ಸೀತಾರಾಮ ದೇವಸ್ಥಾನದಿಂದ ತಂದು ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಸ್ಥಾಪನೆ ಮಾಡಿ, ರಾತ್ರಿ 10ಕ್ಕೆ ಪ್ರತಿಷ್ಠಾಪನೆ ಮಾಡಲಾಗುತ್ತದೆ.

20ರಿಂದ 24ರವರೆಗೆ ವಿಶೇಷ ಆಹ್ವಾನಿತ ಭಜನಾ ಕಲಾವಿಧರಿಂದ  ಹಾಗೂ ಭಜನಾ ಮಂಡಳಿಯಿಂದ ಭಜನೆ ಕಾರ್ಯಕ್ರಮ ನಡೆಯಲಿದೆ. 24ರಂದು ಮಂಗಳವಾರ ಶ್ರೀದೇವಿಗೆ ವಿಶೇಷ ಶ್ರೀ ಮಹಾಕಾಳಿ ರೂಪ ಅಲಂಕಾರ ಮಾಡಲಾಗುವುದು. 25ರಂದು ರಾತ್ರಿ 10ಕ್ಕೆ ಶಾರದಾ ಮಾತೆಯ ಭವ್ಯ ಶೋಭಯಾತ್ರೆ ಜರುಗಲಿದೆ. ಶೋಭಾಯಾತ್ರೆ ಅಂಗವಾಗಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಪಾಣೆಮಂಗಳೂರು  ಕಲ್ಲಡ್ಕ  ಮಂಗಳೂರು ಕಡೆಯಿಂದ ಬರುವವರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹಿಂಬದಿಯ ಜಾಗದಲ್ಲಿ ಹಾಗೂ ದ್ವಿಚಕ್ರವಾಹನ ಸವಾರರು ಶ್ರೀದೇವಳದ ಸಮೀಪ ಇರುವ ಎಸ್ ವಿ ಎಸ್ ದೇವಳದ ವಿದ್ಯಾ ಸಂಸ್ಥೆಯ ವಠಾರದಲ್ಲಿ ನಿಲ್ಲಿಸುವಂತೆ ವಿನಂತಿಸಲಾಗಿದೆ ಮೂಡುಬಿದಿರೆ ಸಿದ್ಧಕಟ್ಟೆ  ಬೈಪಾಸ್ ಕಡೆಯಿಂದ ಬರುವ ವಾಹನಗಳು ಬಂಟ್ವಾಳ ಪೇಟೆಗೆ ಬರುವ ದಾರಿಯಲ್ಲಿ ಕೊಟ್ರಮನಗಂಡಿಯ ದೇವರ ಕಟ್ಟೆಯ ಬಸ್ ನಿಲ್ದಾಣದಲ್ಲಿ ನಿಲ್ಲಿಸುವಂತೆ ವಿನಂತಿಸಲಾಗಿದೆ. ಪುಂಜಾಲ್ ಕಟ್ಟೆ,  ಗುರುವಾಯನಕೆರೆ, ಕಡೆಯಿಂದ ಬರುವ ಭಕ್ತಾದಿಗಳು ಜಕ್ರಿಬೆಟ್ಟಿನಿಂದ   ಬಂಟ್ವಾಳ  ಪೇಟೆಯ ತ್ಯಾಗರಾಜ ರಸ್ತೆಯಲ್ಲಿರುವ ಸರಸ್ವತಿ ನರ್ಸಿಂಗ್ ಹೋಮ್ ಇದರ ಮುಂದೆ ಇರುವ  ವಿಶಾಲ ಮೈದಾನ ದಲ್ಲಿ ನಿಲ್ಲಿಸುವಂತೆ ವಿನಂತಿಸಲಾಗಿದೆ

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts