ಬಂಟ್ವಾಳ ಮಹಿಳಾ ವಕೀಲರಿಂದ ಹಿರಿಯ ವಕೀಲರಾದ ಎ. ಕೆ ರಾವ್ ಅವರಿಗೆ ಗುರುವಂದನಾ ಕಾರ್ಯಕ್ರಮ ನಡೆಯಿತು.
ಹಿರಿಯ ಸಿವಿಲ್ ನ್ಯಾಯಧೀಶಾರದ ಭಾಗ್ಯಮ್ಮ, ಪ್ರಧಾನನ ಸಿವಿಲ್ ನ್ಯಾಯದೀಶರಾದ ಚಂದ್ರಶೇಖರ್ ತಳವಾರ, ಹೆಚ್ಚುವರಿ ಸಿವಿಲ್ ನ್ಯಾಯದೀಶರಾದ ಕೃಷ್ಣಮೂರ್ತಿ ಉಪಸ್ಥಿತರಿರದ್ದು ಶುಭ ನುಡಿದರು.
ಹಿರಿಯ ವಕೀಲರಾದ ಪುಂಡಿಕಾಯಿ ನಾರಾಯಣ ಭಟ್ ಎ ಕೆ ರಾವ್ ರವರೊಂದಿಗಿದ್ದ ಅನುಭವನ್ನು ಹಂಚಿಕೊಂಡರು.. ಹಿರಿಯ ವಕೀಲರಾದ ಶೋಭಲತಾ ಸುವರ್ಣ ಶುಭ ಹಾರೈಸಿದರು. ಈ ಸಂದರ್ಭ ವಕೀಲರ ಸಂಘದ ಉಪಾಧ್ಯಕ್ಷರಾದ ರಾಜೇಶ್ ಬೊಳ್ಳುಕಲ್ಲು, ಹಿರಿಯ ವಕೀಲರಾದ ಅಶ್ವಿನ್ ಕುಮಾರ್ ರೈ, ಗಣೇಶಾನಂದ ಸೋಮಯಾಜಿ, ರಮೇಶ್ ಉಪಾಧ್ಯಾಯ, ಡಿ ಜೆ ಶೆಟ್ಟಿ, ಈಶ್ವರ್ ಉಪಾಧ್ಯಾಯ, ಭಾನುಶಂಕರ್ ಬನ್ನಿಂತಾಯ, ಸುರೇಶ ಪೂಜಾರಿ, ವೆಂಕಟರಮಣ ಶೆಣೈ,ವಿನೋದ ಎಸ್, ದಯಾನಂದ ರೈ, ಹಾಗೂ ಸರ್ಕಾರಿ ವಕೀಲರು, ಹಾಗೂ ಹಿರಿಯ ಕಿರಿಯ ವಕೀಲರು ಉಪಸ್ಥಿತರಿದ್ದರು. ಮೊಹಮ್ಮದ್ ಕಬೀರ್ ಸ್ವಾಗತಿಸಿ ಚಂದ್ರಶೇಖರ್ ಪುಂಚೆಮೆ ವಂದಿಸಿದರು.