ಸಿನಿಮಾ

ಮನೋರಂಜನೆ ಜತೆಗೆ ಮನೋವಿಕಸನದ ಚಿತ್ರಗಳು ಬರಲಿ: ಬನ್ ಟೀ ಚಿತ್ರ ಬಿಡುಗಡೆಯಲ್ಲಿ ಹಿರಿಯ ಪತ್ರಕರ್ತ ಕುಮಾರ್‌ನಾಥ್

ಮಂಗಳೂರು : ಮನೋರಂಜನೆ ಜತೆಗೆ ಮನೋವಿಕಸನ ಮಾಡುವ ಮತ್ತು ಮಕ್ಕಳ ಬದುಕಿಗೆ ಸ್ಪೂರ್ತಿ ನೀಡುವ ಸಿನಿಮಾಗಳ ಅಗತ್ಯತೆ ಇದೆ. ಈ ಪೈಕಿ ಬನ್ ಟೀ ಚಲನಚಿತ್ರ ಸಮಾಜಮುಖಿ ಚಿಂತನೆಗೆ ಹಚ್ಚುವ ಪ್ರಯತ್ನವಾಗಿ ನಿರ್ಮಿಸಿರುವುದು ಶ್ಲಾಘನೀಯ ಎಂದು ಎಂದು ಹಿರಿಯ ಪತ್ರಕರ್ತ ಯು. ಕೆ. ಕುಮಾರ್‌ನಾಥ್ ಹೇಳಿದರು.

ಜಾಹೀರಾತು

ನಗರದ ನಕ್ಸಸ್ ಮಾಲ್‌ನ ಪಿವಿಆರ್ ಮಲ್ಟಿಫ್ಲೆಕ್ಸ್ನಲ್ಲಿ ಶುಕ್ರವಾರ ಡಾ. ನಾಗತ್ತಿಹಳ್ಳಿ ಚಂದ್ರಶೇಖರ್ ಪ್ರಸ್ತುತಿಯ ಉದಯ್ ಕುಮಾರ್ ಪಿ. ಎಸ್ ನಿರ್ದೇಶನದ “ಬನ್-ಟೀ” ಕನ್ನಡ ಚಲನಚಿತ್ರವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಜಾಹೀರಾತು

ಈ ಸಂದರ್ಭ ಹಿರಿಯ ಕಲಾವಿದ ಕದ್ರಿ ನವನೀತ ಶೆಟ್ಟಿ ಮಾತನಾಡಿ, ಇಂದಿನ ಯುವ ಪೀಳಿಗೆಗೆ ಶಿಕ್ಷಣ ಕ್ಷೇತ್ರದಲ್ಲಿ ಆಗಬೇಕಾದ ಬದಲಾವಣೆಯ ಸಂದೇಶ ನೀಡಬಲ್ಲ ಬನ್ ಟೀ ಎಂಬ ಮೌಲ್ಯಯುತ ಸಿನಿಮಾದಲ್ಲಿ ಮಂಗಳೂರಿನ ಬಾಲನಟ ತನ್ಮಯ್ ಶೆಟ್ಟಿ ಅಭಿನಯಿಸಿರುವುದು ಕರಾವಳಿಗರಿಗೆ ಹೆಮ್ಮೆಯ ವಿಷಯ ಎಂದರು.

ಈ ಸಂದರ್ಭ ನಟ, ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ. ಬಿ. ಹರೀಶ್ ರೈ, ವಿಜಯ ಕರ್ನಾಟಕದ ಎಜಿಎಂ ರಾಮಕೃಷ್ಣ ಡಿ., ಉದ್ಯಮಿಗಳಾದ ಅಶ್ವತ್ಥಾಮ ಹೆಗ್ಡೆ, ಪ್ರಥಮ್ ಭಂಡಾರಿ, ವಾಲ್ಟರ್ ನೊರೊನ್ಹಾ, ರಘುನಾಥ್ ಶೆಟ್ಟಿ, ಬಾಲನಟ ಬಿಜೈ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನ ವಿದ್ಯಾರ್ಥಿ ತನ್ಮಯ್ ಶೆಟ್ಟಿ ಮತ್ತು ಅವರ ಹೆತ್ತವರಾದ ಬಿ. ರವೀಂದ್ರ ಶೆಟ್ಟಿ ಹಾಗೂ ಸುಚಿತ್ರಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಪ್ರಾಧ್ಯಾಪಕಿ ಡಾ.ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts