ಸೌತ್ ಕೆನರಾ ಫೊಟೋಗ್ರಾಫರ್ಸ್ ಎಸೋಸಿಯೇಶನ್ ಬಂಟ್ವಾಳ ವಲಯ ವತಿಯಿಂದ ಬಿ.ಮೂಡ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿ ಜಯರಾಮ ಪೂಜಾರಿ ಜಾಗೃತಿ ಸಂದೇಶ ನೀಡಿದರು, ಅಧ್ಯಕ್ಷತೆಯನ್ನು ಪ್ರಿನ್ಸಿಪಾಲ್ ಯೂಸುಫ್ ವಿಟ್ಲ ವಹಿಸಿದ್ದರು, ಬಂಟ್ವಾಳ ವಲಯದ ಅಧ್ಯಕ್ಷರಾದ ಕಿಶೋರ್ ಎಸ್ ಕುಮಾರ್, ಕಾರ್ಯದರ್ಶಿ ಪ್ರಶಾಂತ್ ಕಲ್ಲಡ್ಕ, ಖಜಾಂಚಿ ವರುಣ್ ಕಲ್ಲಡ್ಕ, ಗೌರವಾಧ್ಯಕ್ಷರಾದ ಹರೀಶ್ ಕುಂದರ್, ಪದಾಧಿಕಾರಿಗಳಾದ ದಯಾನಂದ್ ಬಂಟ್ವಾಳ, ರಾಜರತ್ನ, ಹರೀಶ್ ನಾಟಿ, ರಾಜೇಂದ್ರ ಕೆ,, ರವಿಪ್ರಕಾಶ್, ರೋಷನ್ ಮೊಗರ್ನಾಡು, ಸುಧಾಕರ್ ಸಿದ್ದಕಟ್ಟೆ, ಮೋಹನದಾಸ, ತಾರೇಶ್, ವಿಕೇಶ್ ಯೋಗೀಶ್ ಮೊಗರ್ನಾಡು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಶಾಲಾ ಉಪನ್ಯಾಸಕರಾದ ಅಬ್ದುಲ್ ರಝಕ್ ಅನಂತಾಡಿ ನಿರೂಪಿಸಿದರು.