ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕುಡ್ತಮುಗೇರುನಲ್ಲಿ ಮನೆ ಅಂಗಳದಲ್ಲಿ ಶುಕ್ರವಾರ ರಾತ್ರಿ ನಿಲ್ಲಿಸಿದ್ದ ಸರಕು ತುಂಬಿದ ಪಿಕಪ್ ವಾಹನವನ್ನು ಕಳ್ಳತನ ನಡೆಸಲಾಗಿದೆ.ಎಂ.ಹೆಚ್.ಶಾಮಿಯಾನ ಸಂಸ್ಥೆಗೆ ಸೇರಿದ ಮಹೀಂದ್ರ ಪಿಕಪ್ ವಾಹನದಲ್ಲಿ ಕಬ್ಬಿಣದ ಸರಕುಗಳನ್ನು ತುಂಬಿಸಿ ಮಾಲಿಕ ಅನೀಸ್ ತನ್ನ ಮನೆ ಅಂಗಳದಲ್ಲಿ ಎಂದಿನಂತೆ ನಿಲ್ಲಿಸಿದ್ದರು. ಶನಿವಾರ ಬೆಳಗ್ಗೆ ನೋಡಿದಾಗ ಪಿಕಪ್ ಕಳ್ಳತನ ವಾಗಿದ್ದು ಈ ಬಗ್ಗೆ ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.