ಬಂಟ್ವಾಳ: ಇತ್ತೀಚೆಗೆ ಅಗಲಿದ ರಂಗಕರ್ಮಿ, ತರಬೇತುದಾರ ಮಂಜು ವಿಟ್ಲ ಅವರ ಸಾರ್ವಜನಿಕ ಸಂತಾಪ ಸೂಚಕ ಸಭೆಯನ್ನು ತುಳುಕೂಟ ಸೆ.16ರಂದು ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಆಯೋಜಿಸಿದೆ. ಅಂದು ಸಂಜೆ 4.30ಕ್ಕೆ ಈ ಸಂತಾಪ ಸೂಚಕ ಸಭೆ ನಡೆಯಲಿದೆ. ಸಾಮಾಜಿಕ, ಧಾರ್ಮಿಕ, ರಾಜಕೀಯ, ಸೇವಾ ಕ್ಷೇತ್ರಗಳ ಸಹಿತ ಮಂಜು ವಿಟ್ಲ ತೊಡಗಿಸಿಕೊಂಡಿದ್ದ ಎಲ್ಲ ಕ್ಷೇತ್ರಗಳ ಒಡನಾಡಿಗಳು ಈ ಸಂತಾಪ ಸೂಚಕ ಸಭೆಯಲ್ಲಿ ಭಾಗವಹಿಸಿ ನುಡಿನಮನ ಸಲ್ಲಿಸಲಿದ್ದಾರೆ. ನಾನಾ ಕ್ಷೇತ್ರಗಳಲ್ಲಿ ದುಡಿದಿದ್ದ ರಂಗಕರ್ಮಿ ಮಂಜು ವಿಟ್ಲ ಅವರು ಪ್ರತಿಯೊಬ್ಬರಿಗೂ ಬೇಕಾದವರಾಗಿದ್ದು, ಎಲ್ಲರೊಂದಿಗೆ ಹಿರಿಯ, ಕಿರಿಯ ಎಂಬ ಬೇಧಭಾವವಿಲ್ಲದೆ ಬೆರೆಯುತ್ತಿದ್ದರು. ಈ ಹಿನ್ನೆಲೆಯಲ್ಲಿ ತುಳುಕೂಟ ಬಂಟ್ವಾಳ ಸಮಾನ ಮನಸ್ಕರ ಜತೆ ಸಮಸ್ತ ಸಮಾಜದ ಬಂಧುಗಳಿಂದ ಸಾರ್ವಜನಿಕ ಸಂತಾಪ ಸೂಚಕ ಸಭೆಯನ್ನು ಆಯೋಜಿಸಿದೆ ಎಂದು ತುಳುಕೂಟ ಪ್ರಕಟಣೆಯಲ್ಲಿ ತಿಳಿಸಿದೆ.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)