ಲೊರೆಟ್ಟೊ ಮಾತಾ ಚರ್ಚಿನಲ್ಲಿ ಕನ್ಯಾ ಮಾತೆಯ ಹುಟ್ಟುಹಬ್ಬದ ದಿನವಾದ (ಮೊಂತಿ ಫೆಸ್ತ್ ) ತೆನೆಹಬ್ಬ ವನ್ನು ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು. ಚರ್ಚ್ ಧರ್ಮಗುರುಗಳಾದ ವಂ. ಫ್ರಾನ್ಸಿಸ್ ಕ್ರಾಸ್ತ, ಲೋರೆಟ್ಟೋ ಆಂಗ್ಲಮಾಧ್ಯಮ ಪ್ರೌಢಶಾಲೆ ಮುಖ್ಯೋಪಾಧ್ಯಾಯ ವಂ. ಜೇಸನ್ ಮೋನಿಸ್, ಪ್ರಧಾನ ಧರ್ಮಗುರುಗಳಾಗಿ ಹಾಗೂ ವಂ ಪ್ರತಾಪ್ ನಾಯಕ್ ಬಲಿಪೂಜೆಯನ್ನು ಅರ್ಪಿಸಿದರು.
ಚರ್ಚ್ ಧರ್ಮಗುರುಗಳು ದೇವರ ವಾಕ್ಯದ ಸಂದೇಶದಲ್ಲಿ ಹೆಣ್ಣು ಮಕ್ಕಳು ಹಾಗೂ ಮಹಿಳೆಯರ ತ್ಯಾಗಮಯ ಜೀವನದ ಬಗ್ಗೆ ಪ್ರವಚನ ನೀಡಿದರು. ಕನ್ಯಾಮಾತೆಯ ಪಲ್ಲಕ್ಕಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು
. ಚರ್ಚ್ ವಠಾರದಲ್ಲಿ ಎಲ್ ಇ ಡಿ ಪರದೆ ಅಳವಡಿಸಲಾಗಿತ್ತು. ಕಳೆದ 9 ದಿನಗಳಿಂದ ನಡೆದ ಮಾತೆ ಮರಿಯಮ್ಮನವರ ನೋವೆನಾ ಪ್ರಾರ್ಥನೆಗೆ ಮಕ್ಕಳು ಹೂಗಳನ್ನು ಅರ್ಪಿಸಿದರು. ಎಲ್ಲರಿಗೂ ತೆನೆಯನ್ನು ನೀಡಿ ಗೌರವಿಸಲಾಯಿತು. ಮಾತೆ ಮರಿಯಮ್ಮನವರ ಪಲ್ಲಕ್ಕಿಯನ್ನು ಹೂಗಳಿಂದ ಶೃಂಗರಿಸಲಾಗಿತ್ತು. ಚರ್ಚ್ ಪಾಲನಾ ಮಂಡಳಿ ನೇತೃತ್ವ ವಹಿಸಿದ್ದರು. ಇನ್ನಷ್ಟು ಚಿತ್ರಗಳಿಗೆ ಮುಂದೆ ಓದಿರಿ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…