ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಶ್ರೀ ಕೃಷ್ಣ ಜಯಂತಿ ಆಚರಣೆ ತಾಲೂಕು ಆಡಳಿತ ಸೌಧದ ಹಾಲ್ ನಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಸೀಲ್ದಾರ್ ಎಸ್.ಬಿ.ಕೂಡಲಗಿ, ಶ್ರೀ ಕೃಷ್ಣ ಮನುಕುಲಕ್ಕೆ ನೀಡಿದ ಸಂದೇಶ ಅಪಾರವಾಗಿದ್ದು, ಅನುಷ್ಠಾನ ಮಾಡುವ ಕಾರ್ಯ ನಮ್ಮ ಮೇಲಿದೆ ಎಂದರು.
ಬಂಟ್ವಾಳ ತಾಲೂಕು ಯಾದವ ಸಭಾ ಅಧ್ಯಕ್ಷ ಅಶೋಕ್ ಕುಮಾರ್ ದೀಪ ಪ್ರಜ್ವಲನ ನಡೆಸಿ ಮಾತನಾಡಿ, ಜಗತ್ತಿಗೇ ಉತ್ತಮ ಸಂದೇಶವನ್ನು ಭಗವದ್ಗೀತೆ ಮೂಲಕ ನೀಡಿದ ಶ್ರೀಕೃಷ್ಣ ದೇವರ ಜಯಂತಿಯನ್ನು ಇಂದು ನಾವು ಆಚರಿಸುತ್ತಿದ್ದೇವೆ ಎಂದರು.
ಈ ಸಂದರ್ಭ ಉಪನೋಂದಣಾಧಿಕಾರಿ ಕವಿತಾ, ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಯ ಚಿದಂಬರ ಮತ್ತು ನಟರಾಜ್ ಕೇಂದ್ರ ಸ್ಥಾನಿಯ ಉಪತಹಸೀಲ್ದಾರ್ ನರೇಂದ್ರ ನಾಥ್ ಮಿತ್ತೂರು, ಉಪತಹಸೀಲ್ದಾರ್ ಗಳಾದ ರಾಜೇಶ್ ನಾಯ್ಕ್, ನವೀನ್ ಬೆಂಜನಪದವು, ದಿವಾಕರ ಮುಗುಳೀಯ, ವಿಜಯ ವಿಕ್ರಮ್ , ಕಂದಾಯ ನಿರೀಕ್ಷಕರಾದ ವಿಜಯ್.ಆರ್, ಜನಾರ್ಧನ.ಜೆ, ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು. ಚುನಾವಣಾ ಶಾಖೆಯ ಶ್ರೀಕಲಾ ಸ್ವಾಗತಿಸಿದರು. ಉಪತಹಸೀಲ್ದಾರ್ ದಿವಾಕರ್ ಮುಗುಳ್ಯ ವಂದಿಸಿದರು. ಉಪತಹಸೀಲ್ದಾರ್ ನವೀನ್ ಬೆಂಜನಪದವು ಕಾರ್ಯಕ್ರಮ ನಿರ್ವಹಿಸಿದರು.