ಬಿ.ಸಿ.ರೋಡಿನ ಫ್ಲೈಓವರ್ ಅಡಿಯಲ್ಲಿ ನಿಲ್ಲಿಸಿದ್ದ ತನ್ನ ಬೈಕ್ ಅನ್ನು ಕಳವು ಮಾಡಲಾಗಿದೆ ಎಂದು ಪುನೀತ್ ಎಂಬವರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅವರು ಆಗಸ್ಟ್ 9ರಂದು ಬೆಳಗ್ಗೆ ಬಂಟ್ವಾಳ ಬಿ.ಸಿ.ರೋಡಿನ ಪ್ಲೈ ಓವರ್ ಬಳಿ ತಮ್ಮ ಹೀರೊ ಸ್ಪ್ಲೆಂಡರ್ ಪ್ರೊ ಬೈಕ್ ಅನ್ನು ನಿಲ್ಲಿಸಿ, ಮಂಗಳೂರಿಗೆ ಬಸ್ಸಿನಲ್ಲಿ ತೆರಳಿದ್ದು, ಆಗಸ್ಟ್ 18ರಂದು ಬೈಕ್ ನಿಲ್ಲಿಸಿದ ಜಾಗಕ್ಕೆ ಬಂದು ನೋಡಿದಾಗ ಬೈಕ್ ಇಟ್ಟ ಸ್ಥಳದಲ್ಲಿ ಇರಲಿಲ್ಲ. ಪರಿಸರದಲ್ಲಿ ಹಾಗೂ ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಬೈಕ್ ಪತ್ತೆಯಾಗಿರುವುದಿಲ್ಲ. ಬೈಕಿನ ಅಂದಾಜು ಮೌಲ್ಯ 35 ಸಾವಿರ ರೂ ಆಗಿದ್ದು, ಯಾರೋ ಕಳ್ಳರು ಬೈಕನ್ನು ಕಳವು ಮಾಡಿಕೊಂಡುಹೋಗಿರುವುದಾಗಿ ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.