ಪ್ರಮುಖ ಸುದ್ದಿಗಳು

ಪ್ರದೀಪ್ ಬಡೆಕ್ಕಿಲ ನೇತೃತ್ವದಲ್ಲಿ ‘’ಸ್ವಾತಂತ್ರ್ಯದ ಧ್ವನಿ’’ – 76 ಧ್ವನಿಗಳ ಮೂಲಕ ವಿಶಿಷ್ಟ ಪ್ರಯತ್ನ

ಬಡೆಕ್ಕಿಲ ಪ್ರದೀಪ್

ಕಳೆದ 17 ವರ್ಷಗಳಿಂದ ಮಾಧ್ಯಮದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ, ಹಿನ್ನೆಲೆ ಧ್ವನಿಗೆ ರಾಜ್ಯಾದ್ಯಂತ ಮನೆಮಾತಾಗಿರುವ ಬಡೆಕ್ಕಿಲ ಪ್ರದೀಪ್ ಪರಿಕಲ್ಪನೆಯಲ್ಲಿ ಸ್ವಾತಂತ್ರ್ಯದ ಧ್ವನಿ ಕಾರ್ಯಕ್ರಮ ಮೂಡಿಬರಲಿದೆ.

ಜಾಹೀರಾತು

ಅವರ ರಿವರ್ಬ್ ಇಂಕ್, ಅನ್ನುವಸಂಸ್ಥೆ ಇದರ ನಿರ್ಮಾಣ ಮಾಡಿದರೆ, ಅವರೇ ನಡೆಸುತ್ತಿರುವ ನವೋನ್ನತಿ ಫೌಂಡೇಶನ್ ಅಡಿಯಲ್ಲಿ ಈ ಕಾರ್ಯಕ್ರಮ ಅನಾವರಣಗೊಳ್ಳುತ್ತಿದೆ.

ಭಾರತದ ಸ್ವಾತಂತ್ರ್ಯೋತ್ತರ 76 ವರ್ಷಗಳನ್ನು 76  ವಿವಿಧ  ಧ್ವನಿಗಳನ್ನುಬಳಸಿಕೊಂಡು ಸಂಚಿಕೆಯಲ್ಲಿ ಸ್ವಾತಂತ್ರ್ಯ ಹೋರಾಟದ ಗೆಲುವಿನ ನಂತರ ಭಾರತ ಕಂಡ ಏರಿಳಿತದ ಪರಿಚಯ ಮಾಡಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಬೇರೆ ಬೇರೆ ಮಂದಿ ಭಾರತದ ಕುರಿತು ಮಾತುಗಳನ್ನಾಡುತ್ತಾ ಸಾಗುವ ಈ ಕಾರ್ಯಕ್ರಮ ಸಮುದಾಯದ ಜೊತೆ ನಮ್ಮ ಸಂಬಂಧದ ಅನಾವರಣ ಇರಲಿದೆ ಎಂದವರು ಮಾಹಿತಿ ನೀಡಿದ್ದಾರೆ.

ನವೋನ್ನತಿ ಫೌಂಡೇಶನ್ ಮುಖಾಂತರ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಸಮುದಾಯದ ಜೊತೆ ಕನೆಕ್ಟ್ ಆಗುವ, ಕನ್ನಡದ 76 ಧ್ವನಿಗಳ ಮೂಲಕ ಭಾರತದ 76 ವರ್ಷಗಳ ಕಥೆಯನ್ನು ಹೇಳಲಿದ್ದಾರೆ. ಆಗಸ್ಟ್  15ರಂದು ರಾಜ್ಯದ ಹಲವು ಸಮುದಾಯ ಬಾನುಲಿಗಳಲ್ಲಿ ಈ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ ಎಂದು ಪ್ರದೀಪ್ ಬಡೆಕ್ಕಿಲ ತಿಳಿಸಿದ್ದಾರೆ.

140 ಕೋಟಿ ಜನಸಂಖ್ಯೆಯ ನಮ್ಮ ದೇಶದ ಕಥೆಯನ್ನು ಇಪ್ಪತ್ತು ನಿಮಿಷದ ಈ ಕಾರ್ಯಕ್ರಮದಲ್ಲಿ ಹೇಳುವುದು ಅಸಾಧ್ಯವೇ ಆದರೂ, ನಮ್ಮಮಾತುಗಳಲ್ಲಿ ಅದರ ಅವಲೋಕನ ಮಾಡಿದರೆ, ಅದು ನಮ್ಮೊಳಗೆ ದೇಶಭಕ್ತಿಯ ಬೆಳಕನ್ನು ಹಚ್ಚುತ್ತದೆ ಅನ್ನುವುದು ನಮ್ಮ ನಂಬಿಕೆ. ನವೋನ್ನತಿ ಫೌಂಡೇಶನ್, ಭಾರತದ ಸಂಸ್ಕೃತಿ, ಇತಿಹಾಸ ಹಾಗೂ ಭಾರತೀಯತೆಯ ಕುರಿತು ಕಾರ್ಯಕ್ರಮಗಳನ್ನು ಮಾಡುವ ಹಾಗೂ ಕೆಲಸಗಳನ್ನು ಮಾಡುವ ಉದ್ದೇಶದಿಂದ ಹುಟ್ಟಿದ ಸಂಸ್ಥೆಯಾಗಿದ್ದು, ಈ ಕಾರ್ಯಕ್ರಮವನ್ನೂ ಕೂಡ ಬಡೆಕ್ಕಿಲ ಪ್ರದೀಪ್ ಅವರು ಧ್ವನಿಯ ಮೂಲಕ ತನಗೆ ಸಿಕ್ಕ ಪ್ರೀತಿಯನ್ನು ಧ್ವನಿಯ ಕಾರ್ಯಕ್ರಮದ ಮೂಲಕವೇ ಜನರಿಗೆ ಮರುಹಂಚುವ ಕಿಂಚಿತ್ ಪ್ರಯತ್ನ ಇದು ಎಂದವರು ಮಾಹಿತಿ ನೀಡಿದರು.

ಜೊತೆಗೆ ರಾಜ್ಯದ ಹಲವು ಕಾಲೇಜುಗಳ ಮಾಧ್ಯಮ ವಿದ್ಯಾರ್ಥಿಗಳನ್ನೂ  ಈ ಕೆಲಸದಲ್ಲಿತೊಡಗಿಸಿಕೊಳ್ಳಲಾಗಿದೆ. ಪ್ರದೀಪ್ ಅವರ ತಂಡದ ಶರಧಿ ಆರ್ ಫಡ್ಕೆ ಅಲ್ಲದೇ ದೊಡ್ಡದೊಂದು ತಂಡ 20ರಿಂದ 30 ನಿಮಿಷದೊಳಗಿನ ಈ ಕಾರ್ಯಕ್ರಮಕ್ಕಾಗಿ ಕೆಲಸ ಮಾಡಿದೆ ಎಂದು ಬಡೆಕ್ಕಿಲ ತಿಳಿಸಿದ್ದಾರೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.